ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯಿದೆ(1989), ನಾಗರೀಕ ಹಕ್ಕು ಸಂರಕ್ಷಣೆ ಕಾಯಿದೆ ಇತ್ಯಾದಿ ಸಂಬಂಧ ಜಿಲ್ಲಾ ಮಟ್ಟದ ಜನಜಾಗೃತಿ ವಿಚಾರಸಂಕಿರಣ ಡಿ.ಪಿ.ಸಿ. ಸಭಾಂಗಣದಲ್ಲಿ ಜರಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಎಸ್.ಡಿ.ವೈ.ಎಸ್.ಪಿ. ಎಂ.ಡಿ.ಸುನಿಲ್, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಎಂ.ಮಜೀದ್, ಸಲಹಾ ಸಮಿತಿ ಸದಸ್ಯರಾದ ಕೆ.ಜಯಕುಮಾರ್, ಸದಾನಂದ ಶೇಣಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ಸ್ವಾಗತಿಸಿದರು. ಸಹಾಯಕ ಜಿಲ್ಲಾ ಪರಿಶಿಷ್ಟ ಜಾತಿ ಅಧಿಕಾರಿ ಎಂ.ಅಜಿತ್ ಕುಮಾರ್ ವಂದಿಸಿದರು.