ಕಾಸರಗೋಡು: ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಅಂಗವಾಗಿ ಕಾಞಂಗಾಡ್ ನಗರಸಭೆಯ ಪೂಂಜಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಸೆಂಬ್ಲಿ ಸಭಾಂಗಣ ಸೋಮವಾರ ಉದ್ಘಾಟನೆಗೊಂಡಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲ, ಸದಸ್ಯರಾದ ನೆಜ್ಮಾ ರಾಫಿ. ಫೌಸಿಯಾ ಶರೀಫ್, ಟಿ.ಬಾಲಕೃಷ್ಣನ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ. ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ವಿ. ಮಾಯಾಕುಮಾರಿ ಸ್ವಾಗತಿಸಿದರು. ಎಲ್.ಎಸ್.ಜಿ.ಡಿ. ಸಹಾಯಕ ಇಂಜಿನಿಯರ್ ರಾಯ್ ಮ್ಯಾಥ್ಯೂ ವರದಿ ವಾಚಿಸಿದರು. ಶಾಲೆಯ ಮುಖ್ಯ ಶಿಕ್ಷಕ ಪಿ.ರಮೇಶನ್ ವಂದಿಸಿದರು.