ಉಪ್ಪಳ: ಕೆದ್ವಾರು ಸದಾಶಿವ ದೇವಸ್ಥಾನದ ಪ್ರತಿಷ್ಠಾ ದಿನ ಮಹೋತ್ಸವವು ಇಂದು ಬಂಬ್ರಾಣ ಬೂಡು ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.30 ಕ್ಕೆ ಬೆಳಗಿನ ಪೂಜೆ, 8 ರಿಂದ ಪಂಚಗವ್ಯ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ತಂಬಿಲ, 11 ರಿಂದ ಇಚ್ಲಂಗೋಡು ಮಲೆಂದೂರಿನ ಶ್ರೀಶಾರದಾಂಬ ಮಹಿಳಾ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ದುರ್ಗಾ ನಮಸ್ಕಾರ ಪೂಜೆ ಪ್ರಾರಂಭ, ಸಂಜೆ 6.30 ರಿಂದ ಚೆಂಡೆವಾದನ, 7.30 ರಿಂದ ಅಡ್ಕದ ಶ್ರೀಅಯ್ಯಪ್ಪ ಕುಣಿತ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, 8.30 ರಿಂದ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ.
ಇಚ್ಲಂಗೋಡು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಇತ್ತೀಚೆಗೆ ನಡೆಯಿತು.
ತಂತ್ರಿವರ್ಯ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ ವೇದಪಾರಾಯಣ ಕಲಶ ಪ್ರತಿಷ್ಠೆ, ಶಾಕಲ ಋಕ್ ಸಂಹಿತಾ ಪಾರಾಯಣ, ಬೆಳಗ್ಗಿನ ಪೂಜೆ, 9 ರಿಂದ ವೇದನಾರಾಯಣ ಕಲಶಾಭಿಷೇಕ, ವಿಶೇಷ ಪೂಜೆ, 9.30 ರಿಂದ ನವಕ ಕಲಶ ಪ್ರತಿಷ್ಠೆ, ಗಣಪತಿ ಹೋಮ ಪ್ರಾರಂಭ, 10ಕ್ಕೆ ಶ್ರೀಕೋಮಾರುಚಾಮುಂಡಿ ದೈವದ ಭಂಡಾರ ಆಗಮನ, 10.30 ರಿಂದ ಗಣಪತಿ ಹೋಮ ಪೂರ್ಣಾಹುತಿ, ನವಕ ಕಲಶಾಭಿಷೇಕ, ಪೂಜೆ, 11.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 1ಕ್ಕೆ ಶ್ರೀದೇವರ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಭಜನೆ, 6.45 ರಿಂದ ಸಹಸ್ರ ದೀಪೋತ್ಸವ ಸಹಿತ ದೀಪಾರಾಧನೆ, ಮಂಗಳಾರತಿ, ರಾತ್ರಿ 7 ರಿಂದ ತಾಯಂಬಕ, 7.30 ರಿಂದ ಅನ್ನಸಂತರ್ಪಣೆ, 8.30 ರಿಂದ ರಂಗಪೂಜೆ, 9 ರಿಂದ ಉತ್ಸವ, ದರ್ಶನ ಬಲಿ, ವಿಶೇಷ ಬೆಡಿ ಸೇವೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಹಾಗೂ ರಾತ್ರಿ 1 ರಿಂದ ಶ್ರೀಕೋಮಾರುಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ. ಫೆ.15 ರಂದು ಬೆಳಿಗ್ಗೆ 7 ರಿಂದ ಶುದ್ದಿ ಕಲಶ, ಪೂಜೆ, ಪ್ರಸಾದ ವಿತರಣೆ ನಡೆಯಿತು.