ಮಂಜೇಶ್ವರ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಜ್ಞಾನವಾಹಿನಿ ಮಂಜೇಶ್ವರ ವಲಯ ಸಮಿತಿಯ ಸರಣಿ ಕಾರ್ಯಕ್ರಮದ ಚಾಲನೆ ಇಂದು(ಫೆ.7) ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2 ರಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 4 ಕ್ಕೆ ಸರಣಿ ಕಾರ್ಯಕ್ರಮದ ಚಾಲನಾ ಸಮಾರಂಭ ಆರಂಭಗೊಳ್ಳಲಿದ್ದು ಒಡಿಯೂರು ಶ್ರೀಗುರುದೇವ ಸೇವಾ ಬಳಗದ ಮಂಜೇಶ್ವರ ವಲಯದ ಉದ್ಘಾಟನೆಯೂ ನಡೆಯಲಿದೆ. ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸುವರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ, ಗುರುದೇವದತ್ತ ಸಂಸ್ಥಾನದ ಶ್ರೀಮಾತಾನಂದಮಯಿ ಉಪಸ್ಥಿತರಿರುವರು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ ಆಳ್ವ, ಷಷ್ಠ್ಯಬ್ದ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಕೋಶಾಧಿಕಾರಿ ಎ.ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂಜೆ 6 ರಿಂದ ಷಷ್ಠ್ಯಬ್ದ ಸಂಭ್ರಮ ಸಮಿತಿ ಮಂಜೇಶ್ವರ ಪಂಚಾಯತಿ ಘಟಕದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.