ಕಾಸರಗೋಡು: ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಕಯ್ಯೂರು ಸರಕಾರಿ ಐ.ಟಿ.ಐ.ಯಲ್ಲಿ ನವಕೇರಳ ಸ್ಮರಣಿಕ ಹಸುರುದ್ವೀಪ ಯೋಜನೆ ಉದ್ಘಾಟನೆ ಬುಧವಾರ ಜರುಗಿತು. ಶಾಸಕ ಎಂ.ರಾಜಗೋಪಾಲನ್ ಮತ್ತು ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ಜಾರಿಗೊಳಿಸುವ ಯೋಜನೆಗೆ ಇಲ್ಲಿ ಚಾಲನೆ ನೀಡಲಾಯಿತು. ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ಉದ್ಘಾಟಿಸಿದರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಪಿ.ವತ್ಸಲನ್, ಉಪಾಧ್ಯಕ್ಷೆ ಎಂ.ಶಾಂತಾ, ನೀಲೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಪಿ.ಬಿ.ಷೀಬಾ, ಕಾಸರಗೋಡು ನೋಡೆಲ್ ಐ.ಟಿ.ಐ. ಪ್ರಾಂಶುಪಾಲ ಟಿ.ಪಿ.ಮಧು ಮೊದಲಾದವರು ಉಪಸ್ಥಿತರಿದ್ದರು.