ನವದೆಹಲಿ: ಅರ್ಬನ್ ಕೋ ಆಫರೇಟಿವ್ ಬ್ಯಾಂಕುಗಳ ಪ್ರಸ್ತುತ ಸ್ಥಿತಿಗತಿಯ ಕುರಿತಂತೆ ಹಾಗೂ ಆಗಬೇಕಾದ ಬದಲಾವಣೆಯ ಕುರಿತಂತೆ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ (ಆರ್ಬಿಐ) ತಜ್ಞರ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಗೆ ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಎನ್ ಎಸ್ ವಿಶ್ವನಾಥನ್ ಅಧ್ಯಕ್ಷರಾಗಿರಲಿದ್ದಾರೆ. ಈ ಸಮಿತಿಯು ಅರ್ಬನ್ ಬ್ಯಾಂಕುಗಳ ಸ್ಥಿತಿಗತಿಯಷ್ಟೇ ಅಲ್ಲದೇ ಅವುಗಳ ಮುಂದಿನ ಹಾದಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅರ್ಬನ್ ಬ್ಯಾಂಕುಗಳ ಕಾರ್ಯವೈಖರಿ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತೀವೆ. ಹಣಕಾಸಿನ ದುರುಪಯೋಗ ಹಾಗೂ ಅಧಿಕಾರದ ದುರಪಯೋಗ ಅವುಗಳಲ್ಲಿ ಕಂಡು ಬರುತ್ತಿದೆ. ಇದೇ ಆರೋಪದ ಮೇಲೆ ಆರ್ಬಿಐ ಇತ್ತೀಚಿಗಷ್ಟೇ ದೇಶದ ಮೂರು ಅರ್ಬನ್ ಬ್ಯಾಂಕುಗಳ ಕಾರ್ಯಾಚರಣೆ ಮೇಲೆ ನಿಷೇಧ ಹೇರಿತ್ತು.
ಕಳೆದ ಐದು ವರ್ಷಗಳಲ್ಲಿ ಅರ್ಬನ್ ಬ್ಯಾಂಕುಗಳಲ್ಲಿ ಆದ ಬದಲಾವಣೆಯನ್ನು ಗಮನವಾಗಿಟ್ಟುಕೊಂಡು ಸಮಿತಿ ಅಧ್ಯಯನ ನಡೆಸಲಿದ್ದು, ಒಂದು ವರ್ಷದೊಳಗೆ ಆಗಬೇಕಾದ ಬದಲಾವಣೆಯ ಕುರಿತು ವರದಿ ನೀಡಲಿದೆ. ಠೇವಣಿದಾರರ ಹಿತ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್ಬಿಐ ಹೇಳಿದೆ.