ಕಾಸರಗೋಡು: ದೇಶದ ಅಗ್ರಮಾನ್ಯ ಹಾಲು ಉತ್ಪಾದಕ ಎಂಬ ನೆಗಳ್ತೆಗೆ ಪಾತ್ರರಾಗಿರುವ ಡಾ.ವರ್ಗೀಸ್ ಕುರಿಯನ್ ಅವರ ನಾಮಧೇಯದಲ್ಲಿ ಕೇರಳ ರಾಜ್ಯದಲ್ಲಿ ಅತ್ಯುತ್ತಮ ಹಾಲು ಉತ್ಪಾದಕ ಸಂಘಗಳಿಗೆ ನೀಡಲಾಗುವ ಪುರಸ್ಕಾರ"ಡಾ.ವರ್ಗೀಸ್ ಕುರಿಯನ್ ಅವಾರ್ಡ್"ಗೆ ಕಾಸರಗೋಡು ಜಿಲ್ಲೆಯ ಚಿತ್ತಾರಿ ಹಾಲು ಉತ್ಪಾದಕರ ಸಂಘ ಭಾಜನವಾಗಿದೆ.
ರಾಜ್ಯ ದಲ್ಲಿ ಚಟುವಟಿಕೆ ನಡೆಸುತ್ತಿರುವ 314 ಪರಂಪರಾಗತ ಹಾಲು ಉತ್ಪಾದಕರ ಸಂಘಗಳ ಸಾಲಿನಲ್ಲಿ ಚಿತ್ತಾರಿಯ ಸಂಘವನ್ನು ಆಯ್ಕೆ ಮಾಡಲಾಗಿದೆ. ಹಾಲು ಸಂಘ್ರಹ, ಸಂಸ್ಕರಣ, ಆಡಿಟ್ ಕ್ಲಾಸಿಫಿಕೇಷನ್, ವಾರ್ಷಿಕ ಮಾರಾಟ-ಆದಾಯ, ಹಾಲು ಉತ್ಪಾದಕರ ಕಲ್ಯಾಣ ಚಟುವಟಿಕೆಗಳು ಇತ್ಯಾದಿಗಳನ್ನು ಪರಿಶೀಲಿಸಿ ಪುರಸ್ಕಾರಕ್ಕೆ ಆಯ್ಕೆ ನಡೆಸಲಾಗಿದೆ.
ಫೆ.11ರಂದು ಕೊಲ್ಲಂ ಸಿ.ಕೇಶವನ್ ಸ್ಮಾರಕ ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪುರಸ್ಕಾರ ಪ್ರದಾನ ಮಾಡುವರು.
ಕಾಞಂಗಾಡ್ ಬ್ಲಾಕ್ ನ ಅಜಾನೂರು ಗ್ರಾಮದ ರಾವಣೀಶ್ವರ ಕೇಂದ್ರವಾಗಿಸಿ 1975ರ ಮಾ.5ರಂದು ಚಿತ್ತಾರಿ ಹಾಲು ಉತ್ಪಾದಕರ ಸಮಘ ನೋಂದಣಿ ನಡೆಸಿತ್ತು. ತದನಂತರ 1997 ಮೇ 23ರಂದು ಪುನಶ್ಚೇತನಗೊಂಡಿತ್ತು. ಬಾಡಿಗೆ ಕಟ್ಟಡವೊಂದರಲ್ಲಿ 6 ಹಾಲು ಉತ್ಪಾದಕರಿಂದ 9 ಲೀಟರ್ ಹಾಲು ಸಂಗ್ರಹಿಸುವ ಮೂಲಕ ಚಟುವಟಿಕೆ ಆರಮಭಿಸಿದ್ದ ಈ ಸಂಘ ಇಂದು 120 ಮಂದಿ ಹಾಲು ಉತ್ಪಾದಕರಿಂದ 1100 ಲೀ. ಹಾಲು ಪ್ರತಿದಿನ ಸಂಗ್ರಹಿಸುತ್ತಿದೆ. 2.11 ಎಕ್ರೆ ಸ್ವಂತ ಜಾಗದಲ್ಲಿ 2300 ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಸಂಸ್ಥೆ ಹೊಂದಿದೆ.
ಕರುಗಳ ಉದ್ಯಾನ:
ಕಾಸರಗೋಡು ಜಿಲ್ಲೆಯ ಹಾಲು ಉತ್ಪಾದನೆ ವಲಯಕ್ಕೆ ಹೊಸ ಹುರುಪನ್ನು ನೀಡುವ ನಿಟ್ಟಿನಲ್ಲಿ ಚಿತ್ತಾರಿ ಹಾಲು ಉತ್ಪಾದಕರ ಸಂಘದ ಸ್ವಾಮ್ಯದಲ್ಲಿರುವ ಕರುಗಳ ಉದ್ಯಾನವೂ ಭಿವೃದ್ಧಿ ಹೊಂದಿದೆ. ಕೃಷಿಕರು, ಹಾಲು ಉತ್ಪಾದಕರು ಮಾತ್ರವಲ್ಲ ಈ ವಲಯಕ್ಕೆ ನೂತನವಾಗಿ ಪಾದಾರ್ಪಣೆ ನಡೆಸಲು ಆಸಕ್ತರಾದವರಿಗೆ ಮಧ್ಯವರ್ತಿಗಳಿಲ್ಲದೆ ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಲು ಈ ಸಂಸ್ಥೆ ಪೂರಕವಾಗಿದೆ. 2018-19ರಲ್ಲಿ ರಾಜ್ಯ ಹಾಲು ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿ ಮಂಜೂರು ಮಾಡಿರುವ ಎರಡು ಪಾರ್ಕ್ ಗಳಲ್ಲಿ ಈ ಕರುಗಳ ಉದ್ಯಾನವೂ ಒಂದು.
7 ರಿಂದ 15 ತಿಂಗಳ ವಯೋಮಾನದ ಕರುಗಳನ್ನು ಖರೀದಿಸಿ ಇಲ್ಲಿ ಬೆಳೆಸಲಾಗುತ್ತದೆ. ಬೆಳೆದು ಹಸುವಾಗಿ ಕರುವಿಗೆ ಜನನ ನೀಡಿದ ಮೇಲೆ ಜತೆಯಾಗಿ (ಹಸು ಮತ್ತು ಕರು)ಇವನ್ನು ಕೃಷಿಕರಿಗೆ ಮಾರಾಟ ನಡೆಸುವುದು ಈ ಯೋಜನೆಯ ಉದ್ದೇಶ. ಡಿಸೆಂಬರ್ ತಿಂಗಳಲ್ಲಿ ಚಟುವಟಿಕೆ ಆರಮಭಿಸಿರುವ ಈ ಉದ್ಯಾನದಲ್ಲಿ ಈಗಾಗಲೇ 66 ಹಸುಗಳು ಮಾರಾಟಗೊಂಡಿವೆ. 21 ಹಸುಗಳು ಮಾರಾಟಕ್ಕೆ ಸಿದ್ಧವಾಗಿವೆ.
ಉತ್ತಮ ರೋಗ ಪ್ರತಿರೋಧ ಸಾಮರ್ರ್ಥಯ ಹೊಂದಿರುವ, ಹಾಲು ಉತ್ಪಾದನೆ ಸಾಮಥ್ರ್ಯ ಹೊಂದಿರುವ ಹಸುಗಳನ್ನು ಇಲ್ಲಿ ಸಾಕಣೆ ನಡೆಸಲಾಗುತ್ತದೆ. ಈ ಕಾರಣದಿಂದಲೇ ಹಾಲು ಉತ್ಪಾದಕರು, ಹಾಲು ಉತ್ಪಾದನೆ ಸಂಘಗಳು, ಖಾಸಗಿ ವ್ಯಕ್ತಿಗಳು ವಿಶ್ವಾಸವಿರಿಸಿ ಇಲ್ಲಿನ ಹಸುಗಳನ್ನು ಖರೀದಿಸಬಹುದಾಗಿದೆ. ಜಿಲ್ಲೆಯ ಅನೇಕ ಮಂದಿ ಹಾಲು ಉತ್ಪಾದಕರಿಗೆ ಮತ್ತು ಚೀಮೇನಿ ಮುಕ್ತ ಜೈಲಿಗೆ ಇಲ್ಲಿನ ಹಸುಗಳು ಮಾರಾಠಗೊಂಡಿವೆ. ತಮಿಳುನಾಡಿನ ಕೃಷ್ಣಗಿರಿ, ಕರ್ನಾಟಕದ ಚಿಂತಾಮಣಿ ಪ್ರದೇಶಗಳಿಂದ ಮೊದಲ ಹಂತದಲ್ಲಿ ಈ ಉದ್ಯಾನಕ್ಕೆ ಕರುಗಳನ್ನು ಖರೀದಿಸಿ ತರಲಾಗಿತ್ತು.
ಬೆಳೆದ ಹಸುವೊಂದಕ್ಕೆ 45 ಸಾವಿರ ರೂ.ನಿಂದ 75 ಸಾವಿರ ರೂ. ಬೆಲೆಯಿದೆ. ಹಾಲು ಉತ್ಪಾದನೆಯ ಸಾಮಥ್ರ್ಯ, ರೋಗ ಪ್ರತಿರೋಧ ಸಾಮಥ್ರ್ಯಿತ್ಯಾದಿಗಳ ಹಿನ್ನೆಲೆಯಲ್ಲಿ ದರ ನಿಗದಿಯಾಗುತ್ತದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಸಕ್ತರು ಇಲ್ಲಿ ಹಸುಗಳನ್ನು ಖರೀದಿಸಬಹುದು. ಹಸುಗಳಿಗೆ ವಿಮೆ ಸೌಲಭ್ಯ ಒದಗಿಸಿ ಮಾರಾಟ ನಡೆಸಲಾಗುತ್ತದೆ. ಖರಿದಿಯ ಅವಧಿಯಲ್ಲಿ ಹಸುಗಳ ಹೆಲ್ತ್ ಆಂಡ್ ವಾಕ್ಸಿನೇಷನ್ ಸರ್ಟಿಫಿಕೆಟ್ ಖಚಿತಪಡಿಸಲಾಗುವುದು.
ಈ ಹಿಂದೆ ಕಾಸರಗೊಡು ಜಿಲ್ಲೆಯ ಕೃಷಿಕರು ಹಸುಗಳನ್ನು ತಮಿಳುನಾಡು ಸಹಿತ ರಾಜ್ಯಗಳಿಂದ ಖರೀಸುವ ವೇಳೆ ಮಧ್ಯವರ್ತಿಗಳ ಮೂಳಕ ಶೋಷಣೆಗೊಳಗಾಗುತ್ತಿದ್ದ ಕ್ರಮಗಳು ನಡೆಯುತ್ತಿದ್ದುವು. ಈ ಕರುಗಳ ಉದ್ಯಾನ ಸ್ಥಾಪನೆಯ ನಂತರ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.