ಕಾಸರಗೋಡು: ಚಿತ್ತಾರಿಯ ಚಿತ್ತಾರಿ ಸಹಾಯಿ ಚಾರಿಟಿ ಟ್ರಸ್ಟ್ ನೇತೃತ್ವದಲ್ಲಿ ಪ್ರಾರಂಭವಾಗಲಿರುವ ಚಿತ್ತಾರಿ ಡಯಾಲಿಸಿಸ್ ಕೇಂದ್ರದ ಫೇಸ್‍ಬುಕ್ ಪುಟವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಚಿತ್ತಾರಿ ಬಂಗಲೆ -47 ರೆಸ್ಟೋರೆಂಟ್‍ನಲ್ಲಿ ನಡೆದ ಸಮಾರಂಭದಲ್ಲಿ ಡಯಾಲಿಸಿಸ್ ಸೆಂಟರ್ ಕನ್ವೀನರ್ ಮೊಹಮ್ಮದ್ ಕುಂಞÂ ಕತಾರ್ ಅಧ್ಯಕ್ಷತೆಯಲ್ಲಿ ಯುವ ಉದ್ಯಮಿ ಮುಹಮ್ಮದ್ ಕುಂಞÂ ಕುಳತ್ತಿಂಗಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಜೀಬ್ ಮೆಟ್ರೋ, ಹನೀಫಾ ಕುಳತ್ತಿಂಗಲ್, ಅಶ್ರಫ್ ಎ.ಬಿ.ಎಂ, ಹಬೀಬ್ ಕುಳಿಕ್ಕಾಡ್, ಬಶೀರ್ ಮಟ್ಟುಮ್ಮಲ್, ಇರ್ಷಾದ್ ಚಿತ್ತಾರಿ, ಒನ್‍ಫೆÇೀರ್ ಅಹ್ಮದ್, ಶರೀಫ್ ಮಿನ್ನಾ, ಫಜಲ್ ಚಿತ್ತಾರಿ, ಹರೂನ್ ಚಿತ್ತಾರಿ, ಜಮ್ಶೆಡ್ ಕುನ್ನುಮ್ಮಲ್ ಮತ್ತು ಖಾಲಿದ್ ಕುನ್ನುಮ್ಮಲ್ ಉಪಸ್ಥಿತರಿದ್ದರು. ಅನ್ವರ್ ಹಸನ್ ಸ್ವಾಗತಿಸಿ, ಸಿ.ಕೆ.ಕರೀಮ್ ವಂದಿಸಿದರು.