HEALTH TIPS

"ಯಾವುದೇ ಸಿದ್ಧಾಂತವನ್ನು ಮೌನವಾಗಿಸುವಲ್ಲಿ ನಂಬಿಕೆ ಇಲ್ಲ"

           ನವದೆಹಲಿ: ಹಿಂದುತ್ವವಾದಿ ನಾಯಕ ಎಂ.ಎಸ್. ಗೋಳ್ವಾಲ್ಕರ್ ಅವರ ಜನ್ಮ ದಿನದಂದು ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಗೌರವ ಸಲ್ಲಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ದಿನದ ಬಳಿಕ ಸಚಿವಾಲಯದ ಅಧಿಕಾರಿ, ಸಂಸ್ಕೃತಿ ಸಚಿವಾಲಯ ಸಮಾಜದ ಪ್ರತಿಯೊಂದು ವರ್ಗದ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ ಹಾಗೂ ಯಾವುದೇ ಸಿದ್ಧಾಂತವನ್ನು ಮೌನಗೊಳಿಸುವಲ್ಲಿ ನಂಬಿಕೆ ಇರಿಸಿಲ್ಲ ಎಂದು ಪ್ರತಿಪಾದಿಸಿದೆ.

          ಕಳೆದ ಫೆಬ್ರವರಿ 19ರಂದು ಸಚಿವಾಲಯ ಗೋಳ್ವಾಲ್ಕರ್ ಅವರ ಭಾವಚಿತ್ರದೊಂದಿಗೆ ಈ ಪದಗಳನ್ನು ಪೋಸ್ಟ್ ಮಾಡಿತು: ''ಶ್ರೇಷ್ಟ ಚಿಂತಕ, ವಿದ್ವಾಂಸ, ಗಮನಾರ್ಹ ನಾಯಕ ಎಂ.ಎಸ್. ಗೋಳ್ವಾಲ್ಕರ್ ಅವರನ್ನು ಅವರ ಜನ್ಮ ದಿನದಂದು ನೆನಪಿಸಿಕೊಳ್ಳಿ. ಅವರ ಚಿಂತನೆಗಳು ಸ್ಫೂರ್ತಿಯ ಮೂಲ ಹಾಗೂ ತಲೆಮಾರುಗಳಿಗೆ ನಿರಂತರ ಮಾರ್ಗದರ್ಶನ''. ಕೂಡಲೇ, ಪ್ರತಿಪಕ್ಷದ ನಾಯಕರಾದ ಶಶಿ ತರೂರ್ ಹಾಗೂ ಗೌರವ್ ಗೊಗೋಯಿ ಅವರಂತಹ ಪ್ರತಿಪಕ್ಷದ ನಾಯಕರೂ ಸೇರಿದಂತೆ ಹಲವು ಟ್ವಿಟ್ಟರ್ ಬಳಕೆದಾರರು, ಗಾಂಧಿ ಅವರ ಸಿದ್ಧಾಂತವನ್ನು ವಿರೋಧಿಸಿದ್ದ ವ್ಯಕ್ತಿಗೆ ಗೌರವ ನೀಡಿದ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದರು.

            ಯೆಹೂದಿಗಳ ನರಮೇಧ ನಡೆಸಿದ ಹಿಟ್ಲರ್‌ನನ್ನು ಬೆಂಬಲಿಸಿದ ಅವರ ಬರವಣಿಗೆ ಹಾಗೂ ಪದಗಳ ಮೂಲಕ ಗೋಳ್ವಾಲ್ಕರ್ ಅವರ ಕೋಮು ನಂಬಿಕೆಗಳ ಬಗ್ಗೆ ಹಲವರು ಗಮನ ಸೆಳೆದರು. ಗೋಳ್ವಾಲ್ಕರ್ ಭಾರತದ ಧ್ವಜ ಹಾಗೂ ಸಂವಿಧಾನಕ್ಕೆ ಎಂದೂ ಗೌರವ ನೀಡಿರಲಿಲ್ಲ ಎಂದು ಶಶಿ ತರೂರ್ ಗಮನ ಸೆಳೆದರು. ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಅವರನ್ನು ಆರಾಧಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಒಮ್ಮೆ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದರು ಎಂದು ಗೊಗೋಯಿ ಟ್ವೀಟ್ ಮಾಡಿದ್ದರು. ಒಂದು ದಿನದ ಬಳಿಕ ಸಚಿವ ಮಾಧ್ಯಮ ಸಲಹೆಗಾರ ನಿತಿನ್ ತ್ರಿಪಾಟಿ, ''ಜಗತ್ತಿನಲ್ಲೇ ಭಾರತ ಅತಿ ದೊಡ್ಡ ಸಾಂಸ್ಕೃತಿಕ ವೈವಿಧ್ಯಮಯ ದೇಶ. ಸಂಸ್ಕೃತಿ ಸಚಿವಾಲಯ ಸಮಾಜದ ಪ್ರತಿಯೊಂದು ವರ್ಗದ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಸಾಂಪ್ರದಾಯಿಕ ನಿರೂಪಣೆಯ ಒಂದು ಭಾಗವಲ್ಲದ ಯಾವುದೇ ಸಿದ್ಧಾಂತಗಳು ಅಥವಾ ಧ್ವನಿಗಳನ್ನು ಮೌನಗೊಳಿಸುವುದರಲ್ಲಿ ಅದಕ್ಕೆ ನಂಬಿಕೆ ಇಲ್ಲ'' ಎಂದು ಹೇಳಿದ್ದಾರೆ.

           ವಿಭಿನ್ನ ಸಾಮಾಜಿಕ, ಸಾಂಸ್ಕೃತಿಕ ಲಕ್ಷಣಗಳು, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಎಲ್ಲಾ ರೀತಿಯಲ್ಲೂ ಗೌರವಿಸಬೇಕು. ಇದು ಭಾರತದಂತಹ ಪ್ರಜಾಪ್ರಭುತ್ವ ದೇಶದ ಅಗತ್ಯದ ಅಂಶ ಎಂದು ಅವರು ಹೇಳಿದ್ದಾರೆ. ಈ ನಡುವೆ ಗೋಳ್ವಾಲ್ಕರ್ ಅವರಿಗೆ ಗೌರವ ಸಲ್ಲಿಸಿರುವುದನ್ನು ಬಿಜೆಪಿಯ ಹಲವು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಪ್ರಶಂಸಿಸಿದ್ದಾರೆ. ಸಂಸ್ಕೃತಿ ಸಚಿವಾಲಯದ ಈ ವಿವಾದಾತ್ಮಕ ಟ್ವೀಟ್‌ಗೆ ಬಿಜೆಪಿಯ ರಾಜ್ಯ ಸಭಾ ಸಂಸದ ರಾಕೇಶ್ ಸಿನ್ಹಾ ಅಭಿನಂದನೆ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries