ಕೊಚ್ಚಿ: ಕಳೆದ ನಾಲ್ಕೂವರೆ ವರ್ಷಗಳಿಂದ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಾರ್ವಜನಿಕ ವಲಯದ ಸಂಸ್ಥೆಗಳ ಆಧುನೀಕರಣದ ಮೂಲಕ ಇವುಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ವೇಗದ ಮತ್ತು ಸುರಕ್ಷಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದಿರುವರು.
ನಿನ್ನೆ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡ ವಿವಿಧ ಅಭಿವೃದ್ದಿಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಮಾತನಾಡಿದರು.
ಕೇರಳವು ಒಳನಾಡಿನ ಜಲಮೂಲಗಳನ್ನು ಹೊಂದಿದೆ. ಅವುಗಳ ಮೂಲಕ ಸಾರಿಗೆ ಸಾಧ್ಯವಾಗುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಇದರ ಭಾಗವಾಗಿ ಉತ್ತರದ ಬೇಕಲದಿಂದ ದಕ್ಷಿಣದ ಕೋವಳಂ ವರೆಗೆ ಜಲಮಾರ್ಗ ನಿರ್ಮಿಸಲಾಗುವುದು. ಕೊಚ್ಚಿ ರಾಜ್ಯದ ಆರ್ಥಿಕತೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮೋದಿ ಉದ್ಘಾಟಿಸಿರುವ ಸಾಗರ್ ಮೆರೈನ್ ಎಂಜಿನಿಯರಿಂಗ್ ತರಬೇತಿ ಸಂಸ್ಥೆ ಕೇರಳವನ್ನು ಜ್ಞಾನ ಕೇಂದ್ರವನ್ನಾಗಿ ಮಾಡುವ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿ ಕೇಂದ್ರ ಸರ್ಕಾರದೊಂದಿಗೆ ಸಹಕರಿಸಲು ರಾಜ್ಯ ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ಸಿಎಂ ಹೇಳಿರುವರು.