ತಿರುವನಂತಪುರ: ಕೇರಳದ ಪ್ರಮುಖ ಗ್ರಂಥಾಲಯಗಳನ್ನು ಸಂಪರ್ಕಿಸುವ ಯೋಜನೆ ಪೂರ್ಣಗೊಂಡಿದೆ. ಕಾಲ್ನೆಟ್ (ಕೇರಳ ಅಕಾಡೆಮಿಕ್ ಲೈಬ್ರರಿ ನೆಟ್ವರ್ಕ್) ಎನ್ನುವುದು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಗ್ರಂಥಾಲಯಗಳನ್ನು ಪರಸ್ಪರ ವೆಬ್ ನೆಟ್‍ವರ್ಕ್ ಮೂಲಕ ಸಂಪರ್ಕಿಸುವ ಯೋಜನೆಯಾಗಿದೆ.
ಯೋಜನೆ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ದೇಶದಲ್ಲಿ ಇಂತಹ ಮೊದಲ ಯೋಜನೆ ಇದಾಗಿದೆ ಎಂದರು.
ಇದು ಜಗತ್ತಿನ ಎಲ್ಲೆಡೆಯ ಆನ್‍ಲೈನ್ ಸಂಶೋಧಕರಿಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಗ್ರಂಥಾಲಯಗಳ ಪುಸ್ತಕ ಸಂಗ್ರಹಣೆ, ನಿಯತಕಾಲಿಕಗಳು ಮತ್ತು ಸಂಶೋಧನಾ ಪ್ರಬಂಧಗಳ ಬಗ್ಗೆ ತಿಳಿಯಲು ಮತ್ತು ಇ-ಮೇಲ್ ಮೂಲಕ ಸಂಬಂಧಿತ ವಿಷಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಕ್ರಮೇಣ, ವೆಬ್‍ಸೈಟ್‍ನಿಂದಲೇ ವಿಷಯವನ್ನು ಓದಬಹುದಾಗಿದೆ. ಶೀಘ್ರದಲ್ಲೇ ಎಲ್ಲಾ ಕಾಲೇಜು ಗ್ರಂಥಾಲಯಗಳು ಕಾಲ್ನೆಟ್ನ ಭಾಗವಾಗಲಿವೆ ಎಂದು ಅವರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.