ಕೊಚ್ಚಿ: ರಾಜ್ಯದಲ್ಲಿ ವ್ಯಾಪಕ ಅನರ್ಥಕ್ಕೆ ಕಾರಣವಾಗುವ ಆನ್‍ಲೈನ್ ರಮ್ಮಿಯನ್ನು ನಿಷೇಧಿಸಲು ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ಇದಕ್ಕಾಗಿ ಕೇರಳ ಗೇಮಿಂಗ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ತ್ರಿಶೂರ್ ನಿವಾಸಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ಸರ್ಕಾರ ಹೈಕೋರ್ಟ್‍ನಲ್ಲಿ ತನ್ನ ನಿಲುವನ್ನು ತಿಳಿಸಿದೆ.
ಆನ್‍ಲೈನ್ ಜೂಜಾಟ ಗಂಭೀರವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಕೇರಳ ಗೇಮಿಂಗ್ ಕಾಯ್ದೆಯಡಿ ಜೂಜಾಟವು ಶಿಕ್ಷಾರ್ಹವಾಗಿದ್ದರೂ, ಆನ್‍ಲೈನ್ ರಮ್ಮಿ ಸೇರಿದಂತೆ ಇಂತಹ ಹಲವು ಜೂಜುಗಳು ತೀವ್ರವಾದ ಸಾಮಾಜಿಕ ಸ್ವಾಥ್ಯಕ್ಕೆ ಅಡಚಣೆಯಾಗಿದೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಬೇಕು ಮತ್ತು ನಿಷೇಧಿಸಬೇಕು ಎಂದು ವಾದಿ ವಾದಿಸಿದ್ದರು.