ಕಾಸರಗೋಡು: ಕಾಸರಗೋಡು ಜಿಲ್ಲಾ ಪೋಲೀಸ್ ದೂರು ಪರಿಹಾರ ಅದಾಲತ್ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರಗಿತು. ಒಟ್ಟು 48 ದೂರುಗಳು ಈ ವೇಳೆ ಲಭಿಸಿದ್ದು, 22 ದೂರುಗಳಿಗೆ ತೀರ್ಪು ನೀಡಲಾಗಿದೆ. 26 ದೂರುಗಳನ್ನು ಮುಂದಿನ ಕ್ರಮಗಳಿಗಾಗಿ ಇರಿಸಲಾಗಿದೆ. ಪೆÇಲೀಸ್ ದೂರು ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾ ನ್ಯಾಯಮೂರ್ತಿ ಪಿ.ಎಸ್.ದಿವಾಕರನ್ ನೇತೃತ್ವ ವಹಿಸಿದ್ದರು. ಹಿರಿಯ ನಾಗರೀಕ ಅಧಿಕಾರಿ ಅಬೂಬಕ್ಕರ್, ನಾಗರೀಕ ಅಧಿಕಾರಿ ಸುಜಿತ್ ಉಪಸ್ಥಿತರಿದ್ದರು.