ತಿರುವನಂತಪುರ: ಮಲಯಾಳ ಚಿತ್ರರಂಗದ ಖ್ಯಾತ ನಟ ಕೃಷ್ಣಕುಮಾರ್ ಬುಧವಾರ ತಿರುವನಂತಪುರದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸುವ ಮೂಲಕ ಪಕ್ಷಕ್ಕೆ ಪದಾರ್ಪಣೆ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಉಪಸ್ಥಿತಿಯಲ್ಲಿ ಪಕ್ಷದ ಸದಸ್ಯತ್ವ ಸ್ವೀಕರಿಸಿದ ಇವರನ್ನು ಜೆ.ಪಿ ನಡ್ಡಾ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ವಿಧಾನಸಭಾ ಚುನಾವಣಾ ಪೂರ್ವಭಾವಿ ಪ್ರಚಾರದ ಹಿನ್ನೆಲೆಯಲ್ಲಿ ಜೆ.ಪಿ ನಡ್ಡಾ ಎರಡು ದಿವಸಗಳ ಕೇರಳ ಭೇಟಿ ಆಯೋಜಿಸಿದ್ದರು. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ತಾನು ಸಹಕರಿಸುವುದಾಗಿ ಈ ಹಿಂದೆ ಕೃಷ್ಣ ಕುಮಾರ್ ತಿಳಿಸಿದ್ದರು.