ಕಾಸರಗೋಡು: ನಾಡಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಹಕಾರಿ ಬ್ಯಾಂಕುಗಳ ಅಭ್ಯುದಯಕ್ಕಾಗಿ ಸರ್ಕಾರದ ನೆರವು ಸದಾ ಲಭಿಸುವಂತೆ ಮಾಡುವುದಾಗಿ ರಾಜ್ಯ ಕೈಗರಿಕಾ ಖತೆ ಸಚಿವ ಇ.ಪಿ ಜಯರಾಜನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‍ನ ಮುಖ್ಯ ಕಚೇರಿಯ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಪಿ.ಕರುಣಾಕರನ್, ಮಾಜಿ ಶಾಸಕ ಸಿ.ಎಚ್. ಕುಞಂಬು, ಅಸೀಸ್ ಕಡಪ್ಪುರ, ಸಹಕಾರಿ ಇಲಾಖೆ ಅಧಿಕಾರಿಗಳಾದ ಕೆ. ಮುರಳೀಧರನ್, ಎಂ.ಆನಂದನ್, ಲತಾ ಟಿ.ಎಂ, ಪಿ.ಬೈಜುರಾಜ್, ಕೆ.ವಿ ಭಾಸ್ಕನ್, ಮಹಮ್ಮದ್ ಹನೀಫ್, ಕೆ. ಅನಂತನ್ ಉಪಸ್ಥಿತರಿದ್ದರು. ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಎಸ್.ಜೆ ಪ್ರಸಾದ್ ಸ್ವಾಗತಿಸಿದರು. ಬ್ಯಾಂಕ್ ಪ್ರಬಂಧಕ ಅಶೋಕ್ ರೈ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ದಾಮೋದರನ್ ವಂದಿಸಿದರು.