ತಿರುವನಂತಪುರಂ: ನಿನ್ನೆಯಿಂದ ಕೆ.ಎಸ್.ಆರ್.ಟಿ.ಸಿ.ಯ 67 ಬಸ್ ನಿಲ್ದಾಣಗಳ ಪೆಟ್ರೋಲ್ ಮತ್ತು ಡೀಸೆಲ್ ಪಂಪ್‍ಗಳಿಂದ ಇತರ ವಾಹನಗಳಿಗೂ ಇಂಧನ ತುಂಬಿಸಲು ಅವಕಾಸ ನೀಡಲಾಗಿದೆ.
ಕೆ.ಎಸ್.ಆರ್.ಟಿ.ಸಿ ಸಿಎಂಡಿ ಬಿಜು ಪ್ರಭಾಕರ್ ಮತ್ತು ಭಾರತೀಯ ತೈಲ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಕೆ. ಧನ ಪಾಂಡ್ಯನ್ ಒಪ್ಪಂದಕ್ಕೆ ಸಹಿ ಹಾಕಿದರು.
ಇದರೊಂದಿಗೆ, ಕೆಎಸ್‍ಆರ್‍ಟಿಸಿಯ 67 ಡಿಪೆÇೀಗಳಲ್ಲಿ ಸ್ಥಾಪಿಸಲಾದ ಐಒಸಿ ಪಂಪ್ ಗಳಿಂದ ಇತರ ವಾಹನಗಳೂ ಇಂಧನವನ್ನು ತುಂಬಿಸಬಹುದು. ಈವರೆಗೆ, ಕೆ.ಎಸ್.ಆರ್.ಟಿ.ಸಿ ವಾಹನಗಳಿಗೆ ಮಾತ್ರ ತನ್ನ ಗ್ರಾಹಕ ಪಂಪ್‍ಗಳಿಂದ ಇಂಧನ ತುಂಬಲು ಸಾಧ್ಯವಿತ್ತು.