ಬೆಂಗಳೂರು: ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಜನರಿಗೆ ಕೋವಿಡ್ ಲಸಿಕೆ ತಲುಪಿಸುವ ಕಾರ್ಯದಲ್ಲಿ ಖಾಸಗಿ ವಲಯ ಸರ್ಕಾರಕ್ಕೆ ನೆರವಾಗಬಲ್ಲದು ಎಂದು ವಿಪೆÇ್ರೀ ಸಂಸ್ಥೆ ಮುಖ್ಯಸ್ಥ ಅಜೀಮ್ ಪ್ರೇಮ್ ಜೀ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಜೆಟ್ ನಂತರದ ಸಂವಾದದಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತ್ತು ದಾಖಲೆಯ ಸಮಯದಲ್ಲಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಿತರಣೆ ವಿಚಾರದಲ್ಲೂ ಆಡಳಿತವು ವಿಶಾಲವಾಗಿ ಯಶಸ್ವಿಯಾಗಲಿದೆ. ದೊಡ್ಡ ಜನಸಂಖ್ಯೆಯಲ್ಲಿ ಲಸಿಕೆ ವಿತರಣೆ ನಿರ್ವಹಿಸುವುದು ಸವಾಲಿನ ಕೆಲಸ. ಇದು ಅತೀ ಅವಶ್ಯಕ ವಿಚಾರಕೂಡ.. ಈ ವಿಭಾಗದಲ್ಲಿ ಸರ್ಕಾರವು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕೊರೋನಾ ಲಸಿಕೆ ವಿತರಣೆಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ವಲಯ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು. ನಾವೂ ಕೂಡ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ದೊಂದಿಗೆ ಚರ್ಚೆ ನಡೆಸುತ್ತಿದ್ದು, ಪ್ರತೀ ಡೋಸ್ ಗೆ 500 ರೂನೀಡಿ ಲಸಿಕೆ ಪಡೆಯುವ ಸಾಧ್ಯತೆ ಇದೆ. ಸರ್ಕಾರ ಲಸಿಕೆ ವಿತರಣೆಯಲ್ಲಿ ಖಾಸಗಿ ವಲಯವನ್ನು ತೊಡಗಿಸಿಕೊಂಡರೆ, 60 ದಿನಗಳಲ್ಲಿ 500 ಮಿಲಿಯನ್ ಜನರಿಗೆ ಲಸಿಕೆ ವಿತರಿಸಬಹುದು ಎಂದು ಅಜೀಮ್ ಪ್ರೇಮ್ ಜೀ ಹೇಳಿದರು.