ತಿರುವನಂತಪುರ: ಕರ್ನಾಟಕ ಗಡಿಯುದ್ದಕ್ಕೂ ಕೇರಳದಿಂದ ಪ್ರಯಾಣಿಕರು ಮತ್ತು ವಾಹನಗಳ ಸಂಚಾರವನ್ನು ಕೋವಿಡ್ ಹೆಸರಲ್ಲಿ ತಡೆಯುವ ಕರ್ನಾಟಕದ ನಿಲುವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ನಿಯಂತ್ರಣದಿಂದಾಗಿ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು ಮತ್ತು ಆಸ್ಪತ್ರೆಯ ಉದ್ದೇಶಗಳಿಗಾಗಿ ಪ್ರಯಾಣಿಸುವವರು ಬಹಳ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಸಹ ನಿರ್ಬಂಧಿಸಲಾಗಿದೆ.
ಅಂತರರಾಜ್ಯ ಪ್ರಯಾಣವನ್ನು ನಿರ್ಬಂಧಿಸಬಾರದು ಎಂಬ ಕೇಂದ್ರ ಸರ್ಕಾರದ ಸಲಹೆಗೆ ಕರ್ನಾಟಕದ ಈ ಕ್ರಮವು ವಿರುದ್ದವಾದುದಾಗಿದೆ. ಆದ್ದರಿಂದ, ಈ ವಿಷಯದಲ್ಲಿ ಆದಷ್ಟು ಬೇಗ ಸಕಾರಾತ್ಮಕ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪ್ರಧಾನಿಯನ್ನು ಕೇಳಿರುವರು.