ಕಾಸರಗೋಡು: ಕೇರಳದ ಪ್ರೀತಿಗಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧನ್ಯವಾದ ಅರ್ಪಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯಯಾತ್ರೆ ಉದ್ಘಾಟಿಸಲು ಕಾಸರಗೋಡಿಗೆ ನಿನ್ನೆ ಆಗಮಿಸಿದ್ದ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಸಮಾರಂಭದ ನಂತರ ರಾತ್ರಿ ಯೋಗಿ ಕೇರಳಕ್ಕೆ ಫೇಸ್‍ಬುಕ್‍ನಲ್ಲಿ ಧನ್ಯವಾದ ಅರ್ಪಿಸಿದರು.
ಅವರು ಕೇರಳದ ಮಣ್ಣನ್ನು ತಲುಪಿದಾಗ ತುಂಬಾ ಹೆಮ್ಮೆಪಟ್ಟೆ ಎಂದು ಹೇಳಿದರು. ಶತಮಾನಗಳ ಹಿಂದೆ ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಭಾರತದಲ್ಲಿ ಸಾಂಸ್ಕøತಿಕ ಐಕ್ಯತೆಯ ಸಂದೇಶವನ್ನು ರವಾನಿಸಿದ ವ್ಯಕ್ತಿ ಜಗದ್ಗುರು ಆದಿ ಶಂಕರಾಚಾರ್ಯರು. ಅಂತಹ ಮಹಾನ್ ದಾರ್ಶನಿಕನ ಮಣ್ಣಿಗೆ ಪಾದಾರ್ಪಣೆ ಮಾಡಲು ಲಭ್ಯವಾದ ಅವಕಾಶಕ್ಕೆ ಹಾಗೂ ಇಂತಹ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಮತ್ತು ಗೌರವ ಸಲ್ಲಿಸುತ್ತೇನೆ ಎಂದು ಬರೆದಿರುವರು.
ವಿಜಯ ಯಾತ್ರೆಯ ಯಶಸ್ಸಿಗೆ ಉತ್ತರ ಪ್ರದೇಶದ ಎಲ್ಲಾ ಶುಭಾಶಯಗಳು ಎಂದು ಯೋಗಿ ಆದಿತ್ಯನಾಥ್ ಹೇಳಿರುವರು. ಯೋಗಿಯ ಟಿಪ್ಪಣಿಯಲ್ಲಿ ಯೋಗಿಯವರಿಗೆ ನೀಡಿದ್ದ ವಿಶೇಷ ಉಡುಗೊರೆಯ ಚಿತ್ರವೂ ಇತ್ತು.
ಜಗದ್ವಿಖ್ಯಾತ ಯಕ್ಷಗಾನ ಬೊಂಬೆಯಾಟ ಕಲಾವಿದ ಕೆ.ವಿ.ರಮೇಶ್ ಕಾಸರಗೋಡು ಅವರು ತೆಂಕುತಿಟ್ಟಿನ ಯಕ್ಷಗಾನ ಶೈಲಿಯ ಪುತ್ಥಳಿ ನಿರ್ಮಿಸಿದ್ದು, ಕಾಸರಗೋಡು ಜಿಲ್ಲಾ ಹಿಂದೂ ಸಮಾಜೋತ್ಸವ ಸಮಿತಿ ಆ ಉಡುಗೊರೆಯನ್ನು ನೀಡಿತ್ತು.
ಯೋಗಿ ಆದಿತ್ಯನಾಥ್ ಅವರು ಕೇರಳದ ಪಿಣರಾಯಿ ವಿಜಯನ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಯುಪಿಯನ್ನು ನೋಡಿ ನಕ್ಕಿದ್ದ ಕೇರಳ ಮುಖ್ಯಮಂತ್ರಿಯನ್ನು ನೋಡಿ ಜಗತ್ತು ಈಗ ನಗುತ್ತಿದೆ ಎಂದು ಹೇಳಿದರು. ಯೋಗಿ ಅವರ ಭಾಷಣವು ಕೊರೋನಾ ವಿರುದ್ದದ ಸರ್ಕಾರದ ಉಪಕ್ರಮಗಳ ನ್ಯೂನತೆ ಸೇರಿದಂತೆ ಕೇರಳದ ಎಡ ಸರ್ಕಾರದ ವೈಫಲ್ಯಗಳನ್ನು ವಿವರಿಸಿದೆ.