ಕಾಸರಗೋಡು: ಕಾಸರಗೋಡು ಜಿಲ್ಲೆಯ ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವ, 80 ವರ್ಷ ಪ್ರಾಯ ದಾಟಿರುವ ಮಂದಿಗೆ, ವಿಶೇಷಚೇತನರಿಗೆ, ಕೋವಿಡ್ ಪಾಸಿಟಿವ್ ಆಗಿರುವವರಿಗೆ/ ನಿಗಾದಲ್ಲಿರುವವರಿಗೆ ಮೊದಲಾದವರ ಸಾಲಿನಲ್ಲಿ ಸೇರಿರುವ, ನೇರವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ನಡೆಸಲು ಸಾಧ್ಯವಾಗದೇ ಇರುವ ಮಂದಿಗೆ ಈ ಬಾರಿಯ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ವಿಶೇಷ ಅಂಚೆ ಮತದಾನ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕಾಸರಗೋಡು ಜಿಲ್ಲೆಯ ಪತ್ರಕರ್ತರಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿರುವ ಮತದಾತರಲ್ಲಿ 6113 ಮಂದಿ ವಿಸೇಷಚೇತನರು, 13255 ಮಂದಿ 80 ವರ್ಷ ಪ್ರಾಯ ದಾಟಿದವರು ಇದ್ದಾರೆ. ವಿಶೇಷ ಅಂಚೆ ಬಾಲೆಟ್ ಸಂಬಂದ ಎಲ್ಲ ಕ್ರಮಗಳನ್ನೂ ವೀಡಿಯೋ ಚಿತ್ರೀಕರಣ ನಡೆಸಿ ದಾಸ್ತಾನು ಮಾಡಲಾಗುವುದು ಎಂದವರು ಹೇಳಿದರು.
ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವ ಆಬ್ ಸೆಂಟೀಸ್ ಮತದಾತರಲ್ಲಿ ಅಂಚೆ ಮತದಾನ ಸೌಲಭ್ಯಕ್ಕೆ ಅರ್ಜಿ(12 ಡಿ ಫಾರಂ) ಬಿ.ಎಲ್.ಒ.ಗಳ ಮುಖಾಂತರ ಮನೆ ಮನೆಗಳಿಗೆ ತಲಪಿಸಲಾಗುವುದು. ಮತದಾನ ಆಸಕ್ತರು ಅರ್ಜಿ ತಲಪಿದ 5 ದಿನಗಳ ಒಳಗಾಗಿ ಭರ್ತಿಗೊಳಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಅರ್ಜಿಗಳ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಮತದಾನ ವಿಶೇಷ ಪೆÇೀಲಿಂಗ್ ಆಫೀಸರ್ ಅವರ ಮುಕಾಂತರ ಮತದಾತರಿಗೆ ನೀಡಲಾಗುವುದು. ಜಿಲ್ಲಾ ವೈದ್ಯಾಧಿಕಾರಿ ನೀಡುವ ಪಟ್ಟಿಯಲ್ಲಿ ಸೇರಿರುವ ಕೋವಿಡ್ 19 ಪಾಸಿಟಿವ್ ರೋಗಿಗಳಿಗೆ, ನಿಗಾದಲ್ಲಿರುವವರಿಗೆ ಅಂಚೆ ಮತದಾನ ಸೌಲಭ್ಯ ಒದಗಿಸಲಾಗುವುದು. 1048 ಪೆÇೀಲಿಂಗ್ ಅಧಿಕಾರಿಗಳನ್ನು ಈ ನಿಟ್ಟಿನಲ್ಲಿ ನೇಮಕಗೊಳಿಸಲಾಗುವುದು.
ಪ್ರಚಾರ, ಮತದಾನ ವೇಳೆ ಕೋವಿಡ್ ಸಂಹಿತೆಗಳ ಪಾಲನೆ ಕಡ್ಡಾಯ
ಕೋವಿಡ್ 19 ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವಮೂಲಕವೇ ಚುನಾವಣೆಯ ಕ್ರಮಗಳು ಜರುಗಲಿವೆ. ಚುನಾವಣೆಯ ಪ್ರಚಾರ ಮತ್ತು ಮತದಾನ ವೇಳೆ ಸಂಹಿತೆ ಪಾಲನೆ ಕಡ್ಡಾಯವಾಗಿರುವುದು. ಈ ಸಂಬಂಧ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸಿಬ್ಬಂದಿಯ ಸುರಕ್ಷೆ ಸಹಿತ ಎಲ್ಲ ಸೌಲಭ್ಯಗಳನ್ನೂ ಸಿದ್ಧಪಡಿಸಲಾಗುವುದು ಎಂದವರು ನುಡಿದರು.
ಚುನಾವಣೆ ಪ್ರಚಾರ ಸಂಬಂಧ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲೂ ತಲಾ 5 ಸಾರ್ವಜನಿಕ ಮೈದಾನಗಳನ್ನು ಮಂಜೂರು ಮಾಡುವಂತೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಈ ಪ್ರಕಾರ ಸಾರ್ವಜನಿಕ ಸಮಾರಂಭಗಳು ಕೋವಿಡ್ ಸಂಹಿತೆಗಳನ್ನು ಪಾಲಿಸಿ ಈ ಮೈದಾನಗಳಲ್ಲಿ ನಡೆಯಬೇಕು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಮಂಜೂರಾತಿ ಎಂಬ ಕ್ರಮದಲ್ಲಿ ಮೈದಾನ ಒದಗಿಸುವ ಶಿಫಾರಸನ್ನೂ ಈ ವೇಳೆ ಮಾಡಲಾಗಿದೆ. ನಾಮಪತ್ರಿಕೆ ಸಲ್ಲಿಕೆಗೆ ಅಭ್ಯರ್ಥಿಯ ಜತೆಗೆ ಇಬ್ಬರು ಮಾತ್ರ ಆಗಮಿಸಲು ಮಂಜೂರಾತಿ ಇರುವುದು. ಥರ್ಮಲ್ ಸ್ಕಾನಿಂಗ್ ಸಹಿತ ಎಲ್ಲ ಕೋವಿಡ್ ಸುರಕ್ಷಾ ಸಿದ್ಧತೆಗಳನ್ನು ಚುನಾವಣೆ ಅಧಿಕಾರಿಯ ಕಚೇರಿಯಲ್ಲಿ ನಡೆಸಲಾಗುವುದು.
44 ಸೂಕ್ಷ್ಮ ಮತಗಟ್ಟೆಗಳು:
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 44 ಸೂಕ್ಷ್ಮ ಮತಗಟ್ಟೆಗಳು ಇವೆ.( ಕಳೆದ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಸೇ 90ಕ್ಕಿಂತ ಅಧಿಕ ಮತದಾನ ನಡೆದಿರುವ ಮತ್ತು ಪಕ್ಷವೊಂದಕ್ಕೆ ಶೇ 75 ಕ್ಕಿಂತ ಅಧಿಕ ಮತ ಲಭಿಸಿರುವ ಹಿನ್ನೆಲೆಯಲ್ಲಿ ಮರುಚುನಾವಣೆ ನಡೆಸಬೇಕಾಗಿ ಬಂದಿದ್ದ ಮತಗಟ್ಟೆಗಳು) 45 ವಲ್ನರಬಲ್ ಲೊಕೇಷನ್ ಗಳಿವೆ.(ಚುನಾವಣೆ ವೇಳೆ ಅನಗತ್ಯ ಆಮಿಷವೊಡ್ಡು ಸಾಧ್ಯತೆಯ ವ್ಯಕ್ತಿಗಳಿರುವ ಪ್ರದೇಶಗಳು). ಈ ಪ್ರದೇಶಗಳಲ್ಲಿ ಕ್ಯಾಮರಾ ಸೌಲಭ್ಯ ಬಳಸಲಾಗುವುದು. ವೆಬ್ ಕಾಸ್ಟಿಂಗ್ ಕೂಡ ಇರುವುದು.
1591 ಮತಗಟ್ಟೆಗಳು
ಕಾಸರಗೋಡು ಜಿಲ್ಲೆಯಲ್ಲಿ 983 ಮತಗಟ್ಟೆಗಳು, 608 ಆಕ್ಸಿಲಿಯರಿ ಮತಗಟ್ಟೆಗಳ ಸಹಿತ 1591 ಮತಗಟ್ಟೆಗಳಿಗೆ ಮನವಿ ಸಲ್ಲಿಸಲಾಗಿದೆ. ಇವು 524 ಕಡೆಗಳಲ್ಲಿವೆ. 15 ಕಡೆಗಳಲ್ಲಿ ಪ್ರೀ ಫಾಬ್ರಕೇಟೆಡ್ ತಾಂತ್ರಿಕತೆ ಮೂಲಕ ತಾತ್ಕಾಲಿಕ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುವುದು. ಮತಗಟ್ಟೆಗಳಲ್ಲಿ ಅನಿವಾರ್ಯ ಸೇವೆಗಳನ್ನು, ಪ್ರಾಥಮಿಕ ಸೌಲಭ್ಯಗಳನ್ನು ಖಚಿತಪಡಿಸಲಾಗುವುದು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ತಲಾ ಒಮದು ಮತಗಣನೆ ಕೇಂದ್ರ, ವಿತರಣೆ-ಸ್ವೀಕಾ ಕೇಂದ್ರಗಳನ್ನೂ ಸಜ್ಜುಗೊಳಿಸಲು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಚುನಾವನೆಗಾಗಿ 2119 ಕಂಟ್ರೋಲ್ ಯೂನಿಟ್ ಗಳನ್ನೂ, 2174 ಬಾಲೆಟ್ ಯೂನಿಟ್ ಗಳನ್ನೂ, 2141 ವಿವಿ ಪಾಟ್ ಗಳನ್ನೂ ಸಜ್ಜುಗೊಳಿಸಲಾಗಿದೆ. ಇದಲ್ಲದೆ 70 ಕಂಟ್ರೋಲ್ ಗಳನ್ನೂ, 110 ವಿವಿ ಪಾಟ್ ಗಳನ್ನೂ ಕಣ್ನೂರಿಂದ ತರಲಾಗುವುದು.
ಜಿಲ್ಲೆಯ ಸ್ವೀಕಾರ-ವಿತರಣೆ ಕೇಂದ್ರಗಳ ಸಂಬಂಧ ಶಿಫಾರಸುಗಳು( ಕ್ಷೇತ್ರ-ಸ್ವೀಕಾರ-ವಿತರಣೆ ಕೇಂದ್ರ ಎಂಬ ರೀತಿಯಲ್ಲಿ)
ಮಂಜೇಶ್ವರ-ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ.
ಕಾಸರಗೋಡು- ಕಾಸರಗೋಡು ಸರಕಾರಿ ಕಾಲೇಜು.
ಉದುಮಾ-ಪೆರಿಯ ಪಾಲಿಟೆಕ್ನಿಕ್ ಕಾಲೇಜು.
ಕಾಞಂಗಾಡ್-ಪಡನ್ನಕ್ಕಾಡ್ ನೆಹರೂ ಕಾಲೇಜು.
ತ್ರಿಕರಿಪುರ-ಸರಕಾರಿ ಪಾಲಿಟೆಕ್ನಿಕ್ ಕಾಲೇಜು.
ಸ್ವೀಕಾರ ಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ದಾಸ್ತಾನಿಗೆ ಸ್ಟ್ರಾಂಗ್ ರೂಂ ಸಜ್ಜುಗೊಳಿಸಲಾಗುವುದು. ವಿತರಣೆ ಕೇಂದ್ರಗಳಲ್ಲಿ ಪಂಚಾಯತ್ ಚುನಾವಣೆಯಲ್ಲಿ ನಡೆಸಲಾದ ರೀತಿಯ ಕೋವಿಡ್ ಸಂಹಿತೆಗಳನ್ನು ಪಾಲಿಸಿ ಸಿಬ್ಬಂದಿ ಪ್ರವೇಶಿಸಬೇಕು. ಪ್ರತಿ ಮತಗಟ್ಟೆಯಲ್ಲೂ ಇಬ್ಬರು ಮಾತ್ರ ಪ್ರವೇಶ ನಡೆಸಬೇಕು. ಬೆಳಗ್ಗೆ 7 ಗಂಟೆ, 9 ಗಂಟೆ, 11 ಗಂಟೆ ಎಂಬ ರೀತಿ ಮತದಾನ ಸಾಮಾಗ್ರಿಗಳ ವಿತರಣೆ ನಡೆಯಲಿದೆ. ಮತಗಟ್ಟೆಗಳಿಗೆ ಕುಟುಂಬಶ್ರೀ ಆಹಾರ ಪೂರೈಕೆ ನಡೆಸಲಿದೆ. ಕೋವಿಡ್ ಪ್ರತಿರೋಧ ಕಿಟ್ ವಿತರಣೆಯೂ ಜರುಗಲಿದೆ. ಪ್ರತಿ ಮತಗಣನೆ ಕೇಂದ್ರಗಳಲ್ಲೂ 4 ಕೌಂಟಿಂಗ್ ಹಾಲ್ ಗಳಿರುವುವು. ಹಾಲ್ ಗಳಲ್ಲಿ ತಲಾ 7 ಮೇಜುಗಳನ್ನು ಸಜ್ಜುಗೊಳಿಸಲಾಗುವುದು. ಪ್ರತಿ ಸುತ್ತಿನಲ್ಲಿ 28 ಮೇಜುಗಳಲ್ಲಿ ಮತಗಣನೆ ನಡೆಯಲಿದೆ.
ನಿಯಂತ್ರಣ ಕೊಠಡಿ
ಚುನಾವಣೆ ಸಂಹಿತೆ ಜಾರಿಯಾಗುವ ದಿನವೇ ಕಾಸರಗೋಡು ಜಿಲ್ಲಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಗೊಳ್ಳಲಿದೆ. 1950 ನಂಬ್ರಕ್ಕೆ ಕರೆಮಾಡಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು.
ಮಾದರಿ ನೀತಿ ಸಂಹಿತೆ ಜಾರಿಯಾಗುವ ವೇಳೆ ಸಾರ್ವಜನಿಕ ಪ್ರದೇಶಗಳ ಎಲ್ಲ ಪ್ರಚಾರ ಸಾಮಾಗ್ರಿಗಳನ್ನು ತೆರವುಗೊಳಿಸಲಾಗುವುದು. ನಂತರ ಫ್ಲೆಕ್ಸ್ ಬೋರ್ಡ್ ಸ್ಥಾಪನೆಗೆ ಅನುಮತಿಯಿರುವುದಿಲ್ಲ. ಹತ್ತಿ ಬಟ್ಟೆಯನ್ನೇ ಬಳಸಬೇಕು. ಹಸುರು ಮಾದರಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
17 ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ 51 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳನ್ನು ನೇಮಿಸಲಾಗುವುದು. ಪ್ರಚಾರ ವೆಚ್ಚವನ್ನು ಕಡ್ಡಾಯವಾಗಿ ದಾಖಲಿಸಿ ಇರಿಸಿಕೊಳ್ಳಬೇಕು.
ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಅಧಿಕಾರಿಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಂಪ್ಯೂಟರ್ ಕೇಂದ್ರಿತ ನಿಯಂತ್ರಣ ಕೊಠಡಿ ಆರಂಭಿಸಲಾಗುವುದು.
ಚುನಾವಣಾಧಿಕಾರಿಗಳು
ಕ್ಷೇತ್ರ-ಚುನಾವಣೆ ಅಧಿಕಾರಿ- ಎಂಬ ಕ್ರಮದಲ್ಲಿ
ಮಂಜೇಶ್ವರ-ಷಾಜಿ ಎಂ.ಕೆ.(ಸಹಾಯಕ ಜಿಲ್ಲಾಧಿಕಾರಿ, ಎಲ್.ಆರ್.)
ಕಾಸರಗೋಡು-ಷಾಜು(ಆರ್.ಡಿ.ಒ.)
ಉದುಮಾ-ಜಯ ಜೋಸ್ ರಾಜ್ ಸಿ.ಎಲ್.(ಸಹಾಯಕ ಜಿಲ್ಲಾಧಿಕಾರಿ, ಎಲ್.ಎ.)
ಕಾಞಂಗಾಡ್-ಡಿ.ಆರ್.ಮೇಘಶ್ರೀ(ಉಪಜಿಲ್ಲಾಧಿಕಾರಿ, ಕಾಞಂಗಾಡ್)
ತ್ರಿಕರಿಪುರ-ಸಿರೋಜ್ ಪಿ.ಜಾನ್(ಸಹಾಯಕ ಜಿಲ್ಲಾಧಿಕಾರಿ, ಆರ್.ಆರ್.)
21 ಮಂದಿ ನೋಡೆಲ್ ಅಧಿಕಾರಿಗಳು
ಹೊಣೆ-ನೋಡೆಲ್ ಅಧಿಕಾರಿ-ಎಂಬ ಕ್ರಮದಲ್ಲಿ
1. ಮಾನ್ ವೆಲ್ ಮೆನೆಜ್ ಮೆಂಟ್ - ಆಂಜಲೋ ಎ.(ಹುಸೂರ್ ಶಿರಸ್ತೇದಾರ್)
2. ಇ.ವಿ.ಎಂ. ಮೆನೆಜ್ ಮೆಂಟ್- ಪಿ.ಕುಂuಟಿಜeಜಿiಟಿeಜಕಣ್ಣನ್(ವೆಳ್ಳರಿಕುಂಡ್ ತಾಲೂಕು ತಹಸೀಲ್ದಾರ್.)
3, ಟ್ರಾನ್ಸ್ ಪೆÇೀರ್ಟ್ ಮೆನೆಜ್ ಮೆಂಟ್- ರಾದಾಕೃಷ್ಣನ್ ( ಕಾಸರಗೋಡು ಆರ್.ಟಿ.ಒ.)
4. ಟ್ರೈನಿಂಗ್ ಮೆನೆಜ್ ಮೆಂಟ್-ನಿನೋಜ್ ಮೇಪ್ಪಡಿಯತ್(ಸಹಾಯಕ ಯೋಜನೆ ಅಧಿಕಾರಿ)
5. ಮೆಟೀರಿಯಲ್ ಮೆನೆಜ್ ಮೆಂಟ್- ರಾಜನ್ ಎ.ವಿ.( ಹಿರಿಯ ವರಿಷ್ಠಾಧಿಕಾರಿ, ಕಲೆಕ್ಟರೇಟ್.)
6. ಇಂಪ್ಲಿಮೆಂಟಿಂಗ್ ಎಂ.ಸಿ.ಸಿ.-ಅತುಲ್ ಎಸ್.ನಾಥ್(ಎ.ಡಿ.ಎಂ.)
7. ಮೈಂಟೆನೆನ್ಸ್ ಆಫ್ ಲಾ ಆಂಡ್ ಆರ್ಡರ್-ಅತುಲ್ ಎಸ್. ನಾಥ್.(ಎ.ಡಿ.ಎಂ.)
8. ಎಕ್ಸ್ ಪೆಂಡೀಚರ್ ಮಾನಿಟರಿಂಗ್-ಸತೀಶನ್ ಕೆ.(ಸೀನಾನ್ಸ್ ಆಫೀಸರ್.)
9. ನೋಡೆಲ್ ಆಫೀಸರ್ ಫಾರ್ ಅಬ್ಸರ್ ವರ್ಸ್-ವಿನೀತ್ ವಿ.ವರ್ಮ(ಅಗ್ರಿಕಲ್ಚರ್ ಆಫೀಸರ್)
10. ನೋಡೆಲ್ ಆಫೀಸರ್ ಫಾರ್ ಪೆÇೀಸ್ಟಲ್ ಬಾಲೆಟ್ ಪೇಪರ್, ಸರ್ವೀಸ್ ವೋಟರ್ಸ್ ಆಂಡ್ ಇ.ಡಿ.ಸಿ.-ಆಂಟೋ ಪಿ.ಜೆ.(ತಹಸೀಲ್ದಾರ್ ಒ.ಟಿ.)
11. ಮೀಡಿಯಾ ಕಮ್ಯೂನಿಕೇಷನ್- ಮಧುಸೂದನನ್ ಎಂ.(ಜಿಲ್ಲಾ ವಾರ್ತಾಧಿಕಾರಿ.)
12. ನೋಡೆಲ್ ಆಫಿಸರ್ ಫಾರ್ ಕಂಪ್ಯೂಟರೈಸೇಷನ್- ರಾಜನ್ ಕೆ.(ಡಿಸ್ಟ್ರಿಕ್ಟ್ ಇನ್ ಫಾರ್ಮೆಟಿಕ್ ಆಫೀಸರ್)
13. ನೋಡೆಲ್ ಆಫೀಸರ್ ಫಾರ್ ಎಸ್.ವಿ. ಇ.ಇ.ಪಿ.- ಕವಿತಾ ರಾಣಿ ರಂಜಿತ್(ಐ.ಸಿ.ಡಿ.ಎಸ್. ಜಿಲ್ಲಾ ಯೋಜನಾಧಿಕಾರಿ.)
14. ಹೆಲ್ಪ್ ಲೈನ್, ಕಂಪ್ಲೈಂಟ್ ಈಡ್ರಸ್ಸಲ್-ಪ್ರತೀಕ್ಷಾ ಟಿ.ಎಸ್.(ಜ್ಯೂನಿಯರ್ ಸುಪರಿಟೆಂಡೆಂಟ್.)
15. ನೋಡೆಲ್ ಆಫೀಸರ್ ಫಾರ್ ಐ.ಸಿ.ಟಿ.ಅಪ್ಲಿಕೇಷನ್-ಬಿಜು ಸಿ.(ಜ್ಯೂನಿಯರ್ ಸುಪರಿಟೆಂಡೆಂಟ್.)
16. ಎಸ್.ಎಂ.ಎಸ್.ಮಾನಿಟರಿಂಗ್ ಆಂಡ್ ಕಂಯೂನಿಕೇಷನ್ ಪ್ಲಾನ್- ಲೀನಾ(ಅಡೀಷನಲ್ ಜಿಲ್ಲಾ ಇನ್ಸ್ ಫಾರ್ಮೆಟಿಕ್ ಆಫೀಸರ್).
17. ಜಿಲ್ಲಾ ಕಾಂಟಾಕ್ಟ್ ಆಫೀಸರ್, ನೋಡೆಲ್ ಆಫೀಸರ್ ಫಾರ್ ವೋಟರ್ಸ್ ಹೆಲ್ಪ್ ಲೈನ್-ಶೆಲ್ವರಾಜ್ ಡಿ.ಎಸ್.(ಜೆ.ಎಸ್.-ಪಿ.ಜಿ.)
18. ನೋಡೆಲ್ ಆಫೀಸರ್ ಪರ್ಸನ್ ವಿದ್ ಡಸೇಬಿಲಿಟೀಸ್-ಷೀಬಾ ಮುಂತಾಝ್(ಜಿಲ್ಲಾ ಸಮಾಜನೀತಿ ಅಧಿಕಾರಿ.)
19. ಕೋವಿಡ್ ಪ್ರಾಟಾಕಾಲ್ ಆಂಡ್ ಆಬ್ಸೆಂಟೀಸ್ ವೋಟರ್ಸ್-ಷಾಜಿ ಪಿ.ಕೆ.(ಸಹಾಯಕ ಜಿಲ್ಲಾಧಿಕಾರಿ, ಸ್ಪಷಲ್ ಸೆಲ್ ಫಾರ್ ಎಂಡೋಸಲ್ಫಾನ್ ವಿಕ್ಟಿಂಸ್)
20. ಗ್ರೀನ್ ಪ್ರಾಟಾಕಾಲ್-ಲಕ್ಷ್ಮಿ( ಜಿಲ್ಲಾ ಸಂಚಾಲಕಿ- ಜಿಲ್ಲಾ ಶುಚಿತ್ವ ಮಿಷನ್.)
21. ಸೈಬರ್ ಸೆಕ್ಯೂರಿಟಿ-ಪಜೀಷ್ ತೊಟತ್ತಿಲ್( ಅಡೀಷನಲ್ ಎಸ್.ಪಿ. ಕಾಸರಗೋಡು.)
ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನರ್ಂಡಿಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.