ತಿರುವನಂತಪುರ: ಕೇರಳದಲ್ಲಿ ಕೋವಿಡ್ ವ್ಯಾಪಕ ಪ್ರಮಾಣದಲ್ಲಿ ಹರಡಲು ಕಾರಣವಾದ ಅಂಶದ ಬಗ್ಗೆ ವಿಸ್ಕøತ ತನಿಖೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲು ಈವರೆಗೆ ಸರ್ಕಾರ ಏಕೆ ಸಿದ್ಧವಾಗಿಲ್ಲ ಎಂದು ಕೇಂದ್ರ ತಂಡ ಆಶ್ಚರ್ಯ ವ್ಯಕ್ತಪಡಿಸಿದೆ. ಕೇಂದ್ರ ತಂಡವು ಆರೋಗ್ಯ ಸಚಿವರೊಂದಿಗಿನ ಸಮಾಲೋಚನೆಯ ಮಧ್ಯೆ ಹೀಗೊಂದು ಗಮನಾರ್ಹ ವಿಷಯದ ಬಗ್ಗೆ ಪ್ರಶ್ನಿಸಿದೆ.
ಕೋವಿಡ್ ತೀವ್ರವಾಗಿ ಹರಡುತ್ತಿರುವ ಈ ವೇಳೆ ಹೆಚ್ಚಿನ ಪರೀಕ್ಷೆಗಳನ್ನು ಮಾಡದಿದ್ದರೆ ಭಾರೀ ಸವಾಲುಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಇನ್ನೂ ವ್ಯಾಪಕ ಪ್ರಮಾಣದಲ್ಲಿ ಸೋಂಕು ಹೆಚ್ಚಳಗೊಳ್ಳುವ ಸಾಧ್ಯತೆಯೂ ನಿಚ್ಚಳವಾಗಿದೆ. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂದು ಕೇಂದ್ರ ತಂಡವು ರಾಜ್ಯ ಆರೋಗ್ಯ ಸಚಿವರನ್ನು ಕೇಳಿದೆ. ಸೋಂಕಿನ ಹರಡುವಿಕೆಯು ತೀವ್ರಗೊಂಡಂತೆ, ಪರೀಕ್ಷೆಗಳ ಸಂಖ್ಯೆಯೂ ಹೆಚ್ಚಾಗಬೇಕಿತ್ತು. ಆದರೆ ಪರೀಕ್ಷೆಗಳಲ್ಲಿ ಏರಿಕೆಮಾಡದಿರುವುದು ಆಶ್ಚರ್ಯಕ್ಕೆಡೆಮಾಡಿದೆ. ಹಾಗೊಂದು ವೇಳೆ ಪರೀಕ್ಷೆಗಳಲ್ಲಿ ಹೆಚ್ಚಳವಾಗುತ್ತಿದ್ದರೆ ಈಗಾಗಲೇ ಸೋಂಕು ನಿಯಂತ್ರಣ ವಿಧೇಯವಾಗಿರುತ್ತಿತ್ತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ತಂಡ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದೇ ವೇಳೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಮತ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು. ಸೋಂಕು ಹರಡುವಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಇದೀಗ ದಾಖಲಾಗುತ್ತಿದೆ. ಇತರ ರಾಜ್ಯಗಳಲ್ಲಿ, ಸೋಂಕಿನ ಹರಡುವಿಕೆಯು ಕಡಿಮೆ ಇರಲು ಪರಿಶೋಧನೆಯ ಸಂಖ್ಯೆಯಲ್ಲಿ ಹೆಚ್ಚಳವಿರುವುದು ಕಾರಣ ಎಂದು ದೃಢಪಡಿಸಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಪಾಸಿಟಿವಿಟಿ ಇರುವ ರಾಜ್ಯ ಕೇರಳದಲ್ಲಾಗಿದೆ ಎಂದು ಸಚಿವರು ತಂಡಕ್ಕೆ ತಿಳಿಸಿರುವರು.
ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ ಕೇಂದ್ರ ತಂಡ ಶನಿವಾರ ರಾಜ್ಯ ಆರೋಗ್ಯ ಸಚಿವೆಯನ್ನೂ ಭೇಟಿಯಾದರು. ಕೇಂದ್ರ ಸಮಿತಿಯ ವರದಿಯನ್ನು ಶೀಘ್ರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಾಗುವುದು.