ಮಂಜೇಶ್ವರ: ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಪ್ರಯುಕ್ತ ಪರಿಪೂರ್ಣ ವೆಲ್ಫೇರ್ ಫೌಂಡೇಶನ ದಿ ಯೂಥ್ ಫಾರ್ ಸೋಶಿಯಲ್ ಸರ್ವಿಸ್ ಉದ್ಯಾವರ ಮಾಡ ಹಾಗು ನೇಷನಲ್ ಟ್ರಸ್ಟ್ ಎಲ್. ಎಲ್. ಸಿ ಕಾಸರಗೋಡು ಇದರ ಸಹಯೋಗದಲ್ಲಿ ಆಟಿಸಂ ಸೆರೆಬ್ರಲ್ ಪಾಲ್ಸಿ ಮಾನಸಿಕ ವಿಕಲತೆ ಮತ್ತು ಬಹು ಅಂಗಾಂಗ ವೈಕಲ್ಯತೆ ಇರುವವರಿಗಾಗಿ ನಿರಾಮಯ ಹೆಲ್ತ್ ಕಾರ್ಡ್ ಮತ್ತು ಲೀಗಲ್ ಗಾರ್ಡಿಯನ್ ಸರ್ಟಿಫಿಕೇಟ್ ಇನ್ಫಾರ್ಮೇಶನ್ ಶಿಬಿರ ಉದ್ಯಾವರ ಮಾಡ ಜಿ. ಎಲ್. ಪಿ. ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಮೋಹನ್ ಶೆಟ್ಟಿ ಉದ್ಯಮಿ ತೂಮಿನಾಡು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಶ್ಚಂದ್ರ ಮಂಜೇಶ್ವರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿನೇಶ್ ಕೆ(ಡಿ ಎಲ್ ಎಸ್ ಕಾಸರಗೋಡು ಕಾರ್ಯದರ್ಶಿ), ಕಾನೂನು ಮಾಹಿತಿಯನ್ನು ನೀಡಿದರು. ಶಿವರಾಮ ಭಟ್, ಕೆ ಎಂ ವಿಷ್ಣು ಭಟ್ ಹೆಲ್ತ್ ಕಾರ್ಡ್ ಮತ್ತು ಲೀಗಲ್ ಗಾರ್ಡಿಯನ್ ಸರ್ಟಿಫಿಕೇಟ್ ನ ಬಗ್ಗೆ ಮಾಹಿತಿ ನೀಡಿದರು. ಸಂಜೀವ ಶೆಟ್ಟಿ ಮಾಡ, ಉಮೇಶ್ ಪೂಮಣ್ಣು ಉಪಸ್ಥಿತರಿದ್ದರು.
ಪರಿಪೂರ್ಣದ ಅಧ್ಯಕ್ಷ ಶುಶ್ರುತ ಮಾಡ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಮಾಡ ವಂದಿಸಿದರು.