ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನು ಕೊನೆಗೊಳಿಸಿದ್ದಾರೆ. ಆದಾಯ ತೆರಿಗೆ ದರಗಳು ಮತ್ತು ಸ್ಲೇಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಯ ತೆರಿಗೆ ವಿವಾದಗಳನ್ನು ಬಗೆಹರಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು.
ದೇಶದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 2014 ರಲ್ಲಿ 3.31 ಕೋಟಿಯಿಂದ 2020 ರಲ್ಲಿ 6.48 ಕೋಟಿಗೆ ಏರಿಕೆಯಾಗಿದೆ ಎಂದು ಸಚಿವೆ ಬೊಟ್ಟುಮಾಡಿದರು.
ಸೌರ ದೀಪಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ. ಅದನ್ನು ಶೇಕಡಾ ಐದು ಕ್ಕೆ ಇಳಿಸಲಾಗಿದೆ. ಕೆಲವು ವಾಹನ ಘಟಕಗಳ ಮೇಲಿನ ಸುಂಕವನ್ನು ಶೇ 15 ರಷ್ಟು ಹೆಚ್ಚಿಸಲಾಗಿದೆ.