ತಿರುವನಂತಪುರ: ಜನರ ಸಹಭಾಗಿತ್ವದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಜನಜಾಗೃತಿ ವೆಬ್‍ಸೈಟ್ ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕರಿಗೆ ಸಾಕ್ಷ್ಯಗಳ ಜೊತೆಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಲಾಗುವ ವೆಬ್‍ಸೈಟ್‍ನ ಹೆಸರನ್ನು ಸೂಚಿಸುವಂತೆ ಸಾರ್ವಜನಿಕರನ್ನು ಕೇಳಲಾಗಿದೆ.
ಸುಮಾರು 740 ಜನರು ಹೆಸರುಗಳನ್ನು ಈಗಾಗಲೇ ಸೂಚಿಸಿರುವರು. ಅದರಿಂದ ಜನಜಾಗೃತ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು. ಕ್ಯಾಬಿನೆಟ್ ಸಭೆಯ ನಿರ್ಧಾರಗಳನ್ನು ಮುಖ್ಯಮಂತ್ರಿ ಮಾಧ್ಯಮಗಳಿಗೆ ವಿವರಿಸುವ ವೇಳೆ ಈ ಬಗ್ಗೆ ನಿನ್ನೆ ಮಾಹಿತಿ ನೀಡಿದರು.
ಭ್ರಷ್ಟಾಚಾರ ನಿರ್ಮೂಲನೆ ಸರ್ಕಾರದ ಘೋಷಿತ ನೀತಿಯಾಗಿದೆ. ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ವೆಬ್‍ಸೈಟ್ ಮೂಲಕ ಮಾಹಿತಿ ನೀಡಬಹುದು. ವೆಬ್‍ಸೈಟ್‍ನಲ್ಲಿ ಎಲ್ಲಾ ಇಲಾಖೆಗಳ ಹೆಸರುಗಳು ಮತ್ತು ಪ್ರತಿ ಇಲಾಖೆಯ ಅಧಿಕಾರಿಗಳ ವಿವರ ಇರುತ್ತದೆ. ಯಾವುದೇ ಇಲಾಖೆಯಲ್ಲಿ ಯಾವುದೇ ಮಟ್ಟದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಬಹುದು. ಅಂತಹ ಮಾಹಿತಿಯ ಆಧಾರದ ಮೇಲೆ ಭ್ರಷ್ಟಾಚಾರದ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಮೊದಲ ಬಾರಿಗೆ ತೆಗೆದುಕೊಳ್ಳಬಹುದು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತ್ವರಿತಗೊಳಿಸಲಾಗುವುದು ಎಂದು ಸಿಎಂ ಹೇಳಿದರು.
ಸರ್ಕಾರಿ ಅಧಿಕಾರಿಗಳು ತಮ್ಮ ವಿರುದ್ಧ ಕನಿಷ್ಠ ಕೆಲವು ಜನರು ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಭಯಪಡುತ್ತಾರೆ. ಈ ವೆಬ್‍ಸೈಟ್ ಜಾರಿಗೊಳ್ಳುತ್ತಿರುವಂತೆ ಅಂತಹ ಭಯ ಮಾಯವಾಗುತ್ತದೆ. ನಿಜವಾದ ಮತ್ತು ನಕಲಿ ದೂರುಗಳನ್ನು ಗುರುತಿಸಲು ವೆಬ್‍ಸೈಟ್ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಭಯಪಡುವ ಅಗತ್ಯವಿಲ್ಲ. ಜನರ ಸಂಪೂರ್ಣ ಬೆಂಬಲದಿಂದ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯ. ಭ್ರಷ್ಟಾಚಾರ ಮುಕ್ತ ಕೇರಳಕ್ಕೆ ಸ್ಮಾರ್ಟ್ ಫೆÇೀನ್ ಮೂಲಕ ಯಾರಾದರೂ ಪ್ರಯತ್ನಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.