ಕಾಸರಗೋಡು: ಶಾರೀರಿಕ ಶಿಕ್ಷಕ ಸಂಘಟನೆಯ ಜಿಲ್ಲಾ ಸಮ್ಮೇಳನ ಬುಧವಾರ ಕಾಸರಗೋಡಿನಲ್ಲಿ ನಡೆಯಿತು. ಸಮ್ಮೇಳನವನ್ನು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಎಡನೀರು ಉದ್ಘಾಟಿಸಿದರು. ವಿಜಯಕೃಷ್ಣ ಕೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ದೈಹಿಕ ಶಿಕ್ಷಕರನ್ನು ನೇಮಿಸಬೇಕು:
ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಶಾರೀರಿಕ ಶಿಕ್ಷಕರನ್ನು ನೇಮಿಸಬೇಕೆಂದು ಸಂಯುಕ್ತ ದೈಹಿಕ ಶಿಕ್ಷಕ ಸಂಘಟನೆಯ ಸಮ್ಮೇಳನ ಸರ್ಕಾರವನ್ನು ಒತ್ತಾಯಿಸಿದೆ. ಜಿಲ್ಲೆಯ ಹಲವಾರು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಅನೇಕ ವರ್ಷಗಳಿಂದ ಖಾಲಿ ಇದ್ದು ಸರ್ಕಾರ ಕೂಡಲೇ ಶಿಕ್ಷಕರನ್ನು ನೇಮಿಸಬೇಕಾಗಿ ವಿನಂತಿಸಲಾಯಿತು.
ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಕೆ.ಎಂ. ಬಲ್ಲಾಳ್ ಮುಖ್ಯ ಅತಿಥಿಯಾಗಿದ್ದರು. ಶ್ಯಾಮ್ ಪ್ರಸಾದ್, ಶಶಿಕಾಂತ್ ಜಿ.ಆರ್, ಪ್ರೀತಿ, ಬಿಜು ಕೆ, ಅನಿತಾ, ಡಾ.ಅಶೋಕನ್ ಮೊದಲಾದವರು ಶುಭಾಶಂಸನೆಗೈದರು. ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿರುವ ಕುಮಾರನ್, ಪ್ರಭಾಕರನ್ ಕೆ, ಇಮ್ಯಾನುವೆಲ್, ಸುಬ್ರಹ್ಮಣ್ಯ ಉಬ್ರಂಗಳ, ಮಹೇಶ್ ಭಟ್ ಮೊದಲಾದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಶ್ವನಾಥ ಭಟ್, ಕೆ. ಗೋಪಾಲಕೃಷ್ಣ ಭಟ್, ಕಿಶೋರ್ ಶುಭ ಹಾರೈಸಿದರು.