HEALTH TIPS

ಆರೋಗ್ಯ ವಲಯದಲ್ಲಿ ಸಹಕಾರಕ್ಕಾಗಿ ಭಾರತದೊಂದಿಗೆ ಒಡಂಬಡಿಕೆಗೆ ಅಮೆರಿಕ ಆಸಕ್ತಿ

       ನವದೆಹಲಿ: ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಭಾರತದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಸರ್ಕಾರ ನಿರೀಕ್ಷಿಸುತ್ತಿದೆ.

       ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರ ವಕ್ತಾರ ನೆಡ್ ಪ್ರೈಸ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ, ದಶಕಗಳ ಕಾಲದ ಉಭಯ ದೇಶಗಳ ನಡುವಿನ ಸಹಕಾರದಿಂದ ಆರೋಗ್ಯ ಮತ್ತು ಜೈವಿಕವೈದ್ಯಕೀಯ ಸಂಶೋಧನೆಯಲ್ಲಿ ಯಶಸ್ವಿ ಸಾಧ್ಯವಾಗಲಿದೆ. ಉಭಯ ದೇಶಗಳ ನಡುವೆ ಆರೋಗ್ಯ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ಒಡಂಬಡಿಕೆಗೆ ಸಹಿ ಹಾಕಲು ಅಮೆರಿಕ ಎದುರು ನೋಡುತ್ತಿದೆ ಪ್ರೈಸ್ ಹೇಳಿದ್ದಾರೆ.

       ರೋಗವನ್ನು ಎದುರಿಸಲು ರೋಗಪತ್ತೆ, ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ಣಾಯಕ ಈ ಸಮಯದಲ್ಲಿ ಔಷಧಗಳನ್ನು ತಯಾರಿಸುವ ಮಹತ್ವವನ್ನು ಗುರುತಿಸಲು ಹಾಗೂ ಅವು ಜಾಗತಿಕವಾಗಿ ಲಭ್ಯವಾಗುವಂತೆ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

       ಕೊರೋನವೈರಸ್ ಎದುರಿಸುವಲ್ಲಿ ಸಹಕಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಂಕ್ರಾಮಿಕ ರೋಗ ನಿರ್ವಹಣೆಗೆ ಪಾಲುದಾರಿಕೆ ಬಲಪಡಿಸುವುದು, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದಕ್ಕೆ ಭಾರತದೊಂದಿಗೆ ಪಾಲುದಾರಿಕೆಗೆ ನಿರೀಕ್ಷಿಸಲಾಗುತ್ತಿದೆ. ಕೋವಿಡ್-19 ಮತ್ತು ಇತರ ಸಾಂಕ್ರಾಮಿಕ ರೋಗದ ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದ ಮೂಲಕ ಸಹಕರಿಸುವ ಪ್ರಯತ್ನವನ್ನು ಭಾರತ ಮತ್ತು ಭಾರತ ಇತ್ತೀಚೆಗೆ ಸ್ವಾಗತಿಸಿವೆ ಎಂದು ಅವರು ಹೇಳಿದ್ದಾರೆ.

      ಭಾರತದ ಔಷಧ ವಲಯ ಸದೃಢವಾಗಿದ್ದು, ಉತ್ತಮ ರೀತಿಯಲ್ಲಿ ನೆಲೆಗೊಂಡಿದೆ. ಜಾಗತಿಕವಾಗಿ ಜೀವರಕ್ಷಕ ಲಸಿಕೆಗಳ ತಯಾರಿಕೆಗೆ ಇದು ಅನೇಕ ವರ್ಷಗಳಿಂದ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಅಮೆರಿಕದ ಔಷಧ ಉದ್ಯಮವು ಭಾರತೀಯ ಕಂಪನಿಗಳೊಂದಿಗೆ ಸಮನ್ವಯ ಸಾಧಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಪ್ರೈಸ್ ಹೇಳಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries