HEALTH TIPS

ಸರ್ಕಾರಿ ವಾಹನಗಳಿನ್ನು ಎಲೆಕ್ಟ್ರಿಕಲ್‌ ವಾಹನಗಳಾಗಿ ಪರಿವರ್ತನೆ: ಗಡ್ಕರಿ ಸಂಕಲ್ಪ

          ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲ ವಾಹನಗಳನ್ನು ಎಲೆಕ್ಟ್ರಿಕಲ್‌ ವಾಹನಗಳನ್ನಾಗಿ ಪರಿವರ್ತಿಸುವ ಸಂಕಲ್ಪ ಮಾಡಿರುವ ಸಚಿವ ನಿತಿನ್‌ ಗಡ್ಕರಿ, ದೇಶದ ತೈಲ ಆಮದು ಅವಲಂಬನೆ ಕಡಿಮೆ ಮಾಡಲು ಎಲ್ಲ ಇಲಾಖೆಗಳು ಇದನ್ನೇ ಪಾಲಿಸಬೇಕು ಎಂದು ಶುಕ್ರವಾರ ಹೇಳಿದ್ದಾರೆ.

        'ಗೋ ಎಲೆಕ್ಟ್ರಿಕ್' (ವಿದ್ಯುತ್‌ ಚಾಲಿತ ವಾಹನಗಳಿಗೆ ಬದಲಾಗಿ) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ವಿದ್ಯುತ್‌ಚಾಲಿತ ವಾಹನಗಳನ್ನು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

         ಒಂದು ಎಲೆಕ್ಟ್ರಿಕ್ ವಾಹನದಿಂದ ತಿಂಗಳಿಗೆ ಸುಮಾರು ₹30 ಸಾವಿರ ಉಳಿತಾಯ ಮಾಡಬಹುದು. ದೆಹಲಿಯಲ್ಲಿ ಒಂದು ತಿಂಗಳಲ್ಲಿ 10 ಸಾವಿರ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಿದರೆ ಸುಮಾರು ₹30 ಕೋಟಿ ಹಣ ಉಳಿಸಬಹುದು ಎಂದು ಸಚಿವರು ತಿಳಿಸಿದರು.

       'ಅಡುಗೆ ಅನಿಲಕ್ಕೆ ಈಗಾಗಲೇ ಸಬ್ಸಿಡಿ ನೀಡುತ್ತಿದ್ದೇವೆ. ವಿದ್ಯುತ್ ಅಡುಗೆ ಉಪಕರಣಗಳಿಗೆ ಏಕೆ ಸಬ್ಸಿಡಿ ನೀಡಬಾರದು' ಎಂದು ಪ್ರಶ್ನಿಸಿದ ಸಚಿವರು, 'ವಿದ್ಯುತ್‌ ಉಪಕರಣದಿಂದ ಅಡುಗೆ ಮಾಡುವುದು ಶುಚಿಯಾಗಿಯೂ ಇರುತ್ತದೆ, ಅಲ್ಲದೇ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಅಡುಗೆಗಾಗಿ ದುಬಾರಿ ಆಮದು ಅನಿಲ ಖರೀದಿ ಬೆಂಬಲಿಸುವ ಬದಲು, ವಿದ್ಯುತ್ ಅಡುಗೆ ಉಪಕರಣಗಳ ಖರೀದಿಗೆ ಸಬ್ಸಿಡಿ ನೀಡಬೇಕು' ಎಂದರು.

          ಇಂಧನ ಸಚಿವ ಆರ್‌.ಕೆ. ಸಿಂಗ್‌ ಅವರಿಗೂ ತಮ್ಮ ಇಲಾಖೆಯಲ್ಲಿ ಅಧಿಕಾರಿಗಳು ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವುದನ್ನು ಕಡ್ಡಾಯಗೊಳಿಸುವಂತೆ ಗಡ್ಕರಿ ಒತ್ತಾಯಿಸಿದರು.

ಸಚಿವ ಸಿಂಗ್‌ ಅವರು, ವಿದ್ಯುತ್‌ ಚಾಲಿತ ಬಸ್ ಸೇವೆಯನ್ನು ದೆಹಲಿ- ಆಗ್ರಾ ಮತ್ತು ದೆಹಲಿ- ಜೈಪುರ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭ ಘೋಷಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries