ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣವು ದೇಶದ ಆರ್ಥಿಕ ಸ್ಥಿರತೆಯನ್ನು ಬುಡಮೇಲುಗೊಳಿಸುವ ಅಪರಾಧ ಎಂದು ಎನ್.ಐ.ಎ ಚಾರ್ಜ್‍ಶೀಟ್ ಲ್ಲಿ ತಿಳಿಸಲಾಗಿದೆ. 20 ಆರೋಪಿಗಳ ವಿರುದ್ಧ 28 ಪುಟಗಳ ಚಾರ್ಜ್‍ಶೀಟ್‍ನ ಪ್ರತಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಮೊದಲ ಚಾರ್ಜ್‍ಶೀಟ್‍ನಲ್ಲಿ ಮುಖ್ಯಮಂತ್ರಿಯ ಮಾಜಿ ಖಾಸಗಿ ಕಾರ್ಯದರ್ಶಿ ಎಂ.ಶಿವಶಂಕರ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಸರಿತ್, ಸಂದೀಪ್ ಮತ್ತು ಕೆ.ಟಿ.ರಮೀಜ್ ಕೂಡ ಚಿನ್ನದ ಕಳ್ಳಸಾಗಣೆ ನಡೆಸಿದ್ದಾರೆ. ಬಳಿಕ ಸ್ವಪ್ನಾ ಸುರೇಶ್ ಕೂಡ ಇದರಲ್ಲಿ ಭಾಗಿಯಾದರು. ಬಳಿಕ ಅವರ ಹಿಂದೆ ಒಂದು ದೊಡ್ಡ ಗುಂಪು ರೂಪುಗೊಂಡಿತು. ಚಿನ್ನ ಕಳ್ಳಸಾಗಣೆಗಾಗಿ ಭಯೋತ್ಪಾದಕ ಗುಂಪನ್ನು ರಚಿಸಲಾಗಿದೆ. ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದ ಹಣವನ್ನು ಯುಎಇಗೆ ಹವಾಲಾ ಎಂದು ಕಳುಹಿಸಲಾಗಿದೆ. ಚಾರ್ಜ್‍ಶೀಟ್‍ನ ಪ್ರಕಾರ, ನಕಲಿ ದಾಖಲೆಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ವರದಿ ಬೊಟ್ಟುಮಾಡಿದೆ.