ಬೆಂಗಳೂರು: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿನೀಶ್ ಕೋಡಿಯೇರಿಗೆ ಜಾಮೀನು ನಿರಾಕರಿಸಲಾಗಿದೆ. ಬಿನೀಶ್ ಕೊಡಿಯೇರಿಯ ಜಾಮೀನು ಅರ್ಜಿಯನ್ನು ಬೆಂಗಳೂರು ಸೆಷನ್ಸ್ ನ್ಯಾಯಾಲಯ ನಿನ್ನೆ ತಿರಸ್ಕರಿಸಿದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬೇಡಿ ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿತು. ಇದರ ಬೆನ್ನಲ್ಲೇ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಹಿಂದೆ ಅದೇ ನ್ಯಾಯಾಲಯ ಬಿನೀಶ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರಕರಣದಲ್ಲಿ 72 ದಿನಗಳ ಕಸ್ಟಡಿಯಲ್ಲಿದ್ದ ಬಿನೀಶ್ ಬಳಿಕ ನೀಡಲಾದ ಜಾಮೀನಿನ ಮೇರೆಗೆ ಬಿಡುಗಡೆ ಕೋರಿ ಅರ್ಜಿ ಸಲಲಿಸಿದ್ದರು.
ಬೆಂಗಳೂರು ಮಾದಕವಸ್ತು ಪ್ರಕರಣದ ಎರಡನೇ ಆರೋಪಿ ಮೊಹಮ್ಮದ್ ಅನೂಪ್ ಆಗಿದ್ದಾನೆ. ಕಳೆದ ವರ್ಷ ಇಡಿ ಹಣಕಾಸಿನ ವಹಿವಾಟಿನ ತನಿಖೆಯನ್ನು ತೀವ್ರಗೊಳಿಸಿತು. ಬಿನೀಶ್ ನನ್ನು ಅಕ್ಟೋಬರ್ 29 ರಂದು ಬಂಧಿಸಲಾಯಿತು. ಬಿನೀಶ್ ನವೆಂಬರ್ 11 ರಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ರಿಮಾಂಡ್ ಗೊಳಗಾಗಿರುವರು.