ಉಪ್ಪಳ: 60 ವರ್ಷಗಳಷ್ಟು ಹಳತಾಗಿರುವ ಬೇಕೂರು ಕುಟುಂಬಕಲ್ಯಾಣ ಉಪಕೇಂದ್ರವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ನವೀಕರಣ ನಡೆಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಭರವಸೆ ನೀಡಿದರು.
ಹಳತಾಗಿರುವ ಕಟ್ಟಡದ ನವೀಕರಣ ನಡೆಸುವಂತೆ ಸಾರ್ವಜನಿಕರು ಸತತ ಮನವಿ ಸಲ್ಲಿಸಿದ್ದರು. ಈ ಸಂಬಂಧ ರಚಿಸಲಾದ ಕ್ರಿಯಾ ಸಮಿತಿಯ ಸದಸ್ಯರು ಸಾಂತ್ವನ ಸ್ಪಶರ್ಂ ಅದಾಲತ್ ಗೆ ಮಂಗಳವಾರ ಹಾಜರಾಗಿ ಸಚಿವೆಗೆ ಮನವಿ ಸಲ್ಲಿಸಿದ್ದು, ಅವರು ಈ ಬಗ್ಗೆ ಸ್ಪಂದಿಸಿ ನವೀಕರಣಕ್ಕೆ ಆದೇಶ ನೀಡಿದರು.
ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಎನ್.ಎಚ್.ಎಂ.ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್ ಅವರಿಗೆ ಹೊಣೆ ನೀಡಿದ್ದಾರೆ. ಪುನರ್ ನಿರ್ಮಾಣವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸುವಂತೆ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಅವರಿಗೆ ಆದೇಶಿಸಿದ್ದಾರೆ.