ಕಾಸರಗೋಡು:: ಕೋವಿಡ್ ಲಾಕ್‌ಡೌನ್ ನಂತರ ಸ್ಥಗಿತಗೊಂಡಿದ್ದ ಕಾಸರಗೋಡು-ಬಿ.ಸಿ ಸಂಪರ್ಕದ ಕರ್ನಾಟಕ ರಸ್ತೆಸಾರಿಗೆ ನಿಗಮದ ಬಸ್ ಶನಿವಾರದಿಂದ ಪುನರಾರಂಭಗೊಂಡಿದೆ. ಬಸ್ ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಕಾಸರಗೋಡಿನಿಂದ ಹೊರಡುತ್ತದೆ. ಮಂಗಳೂರು ವಿಶ್ವವಿದ್ಯಾಲಯ, ಮುಡಿಪ್ಪು ಮತ್ತು ದೇರಳಕಟ್ಟೆ ಪ್ರದೇಶ ಸಹಿತ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನ ಸಂಚರಿಸುವವರಿಗೆ ಪುನರಾರಂಭಗೊಂಡ ಸೇವೆಯಿಂದ ದೊಡ್ಡ ಪ್ರಯೋಜನವಾಗಲಿದೆ.