ಕಾಸರಗೋಡು: ನ್ಯಾಷನಲ್ ಸ್ಟಾಟಿಸ್ಟಿಕಲ್ ಕಚೇರಿ ನಡೆಸುವ 78ನೇ ಸಾಮಾಜಿಕ ಆರ್ಥಿಕ ಸಮೀಕ್ಷೆ ಫೆಬ್ರವರಿ ಎರಡನೇ ವಾರ ವರ್ಕಾಡಿ ಗ್ರಾಮ ಪಂಚಾಯತ್ ನ 8ನೇ ವಾರ್ಡ್ ನಲ್ಲಿ ಆರಂಭಿಸಲಾಗುವುದು. ಕಂಟೈ ನಮ್ಮೆಂಟ್ ಝೋನ್ ಆಗಿದ್ದ ಹಿನ್ನೆಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ಸಮೀಕ್ಷೆ ಮುಂದೂಡಲಾಗಿತ್ತು.
ಕುಟುಂಬ ಸದಸ್ಯರು, ತಿಂಗಳ ವೆಚ್ಚ, ಮೂಲಭೂತ ಸೌಲಭ್ಯಗಳು, ಹೊಂದಿರುವ ಜಾಗ, ಖರೀದಿಸಿದ ಯಾ ನಿರ್ಮಿಸಿರುವ ಮನೆ ಯಾ ಫ್ಲಾಟ್, ಮನೆ ನಿರ್ಮಾಣಕ್ಕೆ ಬಳಸಿರುವ ಸಾಮಾಗ್ರಿಗಳು, ಸಾಲ, ನೌಕರಿ, ಸರಕಾರದ ವಿವಿಧ ಯೋಜನೆಗಳ ಬಗೆಗಿನ ಮಾಹಿತಿ, ದೂರುವಾಣಿ, ಟೀವಿ, ಸುದ್ದಿ ಪತ್ರಿಕೆ ಇತ್ಯಾದಿಗಳ ಲಭ್ಯತೆ ಇತ್ಯಾದಿ ಮಾಹಿತಿಗಳನ್ನು ಈ ವೇಳೆ ಸಂಗ್ರಹಿಸಲಾಗುವುದು ಎಂದು ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ನಿರ್ದೇಶಕ ಎಫ್.ಮುಹಮ್ಮದ್ ಯಾಸಿರ್ ತಿಳಿಸಿದರು.