ಕೊಚ್ಚಿ: ದಕ್ಷಿಣ ಏಷ್ಯಾದ ಅತಿದೊಡ್ಡ ಆನ್ ಲೈನ್ ಕ್ರೌಡ್ ಫಂಡಿಂಗ್ ಪ್ಲಾಟ್‍ಫಾರ್ಮ್ ಮಿಲಾಪ್, ವೆಚ್ಚದಾಯಕ ಚಿಕಿತ್ಸೆ ಪಡೆಯಲು ಸಾಧ್ಯವಾಗದ ರೋಗಿಗಳಿಗೆ ಸಹಾಯ ಮಾಡಲು ಕೇರಳದ ಪ್ರಮುಖ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಲಿದೆ.
ಮಿಲಾಪ್ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ವಿಪಿಎಸ್ ಲೇಕ್‍ಶೋರ್, ಆಸ್ಟರ್ ಮೆಡಿಕಲ್ ಸಿಟಿ ಮತ್ತು ರಾಜ್ ಗಿರಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಆನ್ ಲೈನ್ ಕ್ರೌಡ್‍ಫಂಡಿಂಗ್ ಬಗ್ಗೆ ತಿಳಿದಿಲ್ಲದ ದುಬಾರಿ ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಆಸ್ಪತ್ರೆಗಳು ಮಿಲಾಪ್ ಮೂಲಕ ಹಣವನ್ನು ಸಂಗ್ರಹಿಸುವ ಅವಕಾಶವನ್ನು ಒದಗಿಸುತ್ತವೆ.
ಕೊಚ್ಚಿಯ ಪ್ರಮುಖ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಯಾದವ್ ಅವರೇ ಮಿಲಾಪ್ ಗೆ ಅನೇಕ ರೋಗಿಗಳ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಸೂಚಿಸಿದ್ದರು. ಯಾವುದೇ ವೈದ್ಯರ ಮುಖ್ಯ ಗುರಿ ರೋಗಿಯ ಸಂಪೂರ್ಣ ಚೇತರಿಕೆ. ಆದಾಗ್ಯೂ, ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸಬಹುದಾದರೂ, ಚಿಕಿತ್ಸೆಗೆ ಆರ್ಥಿಕ ಸಾಮಥ್ರ್ಯದ ಕೊರತೆಯು ಕಳವಳಕ್ಕೆ ಕಾರಣವಾಗುತ್ತಿದೆ ಎಂದು ಅಭಿಷೇಕ್ ಯಾದವ್ ಬೊಟ್ಟುಮಾಡುತ್ತಾರೆ. ಅಂತಹ ರೋಗಿಗಳಿಗೆ ಮಿಲಾಪ್ ನಂತಹ ಕ್ರೌಡ್ ಫಂಡಿಂಗ್ ಪ್ಲಾಟ್‍ಫಾರ್ಮ್‍ಗಳು ಬಹಳ ಸಹಾಯಕವಾಗಿವೆ ಎಂದು ಅಭಿಷೇಕ್ ಸವಿರ ಸ್ಪಷ್ಟನೆ ನೀಡಿರುವರು.
ಇತ್ತೀಚೆಗೆ ತುರ್ತು ಪಿತ್ತಜನಕಾಂಗದ ಕಸಿ ಹೊರತುಪಡಿಸಿ ಗಂಭೀರ ಪಿತ್ತಜನಕಾಂಗದ ಕಾಯಿಲೆಯಿಂದ ಕೊಚ್ಚಿಯ ಪ್ರಮುಖ ಖಾಸಗಿ ಆಸ್ಪತ್ರೆಗೆ ಸಾಗಿಸಿದ ಒಂದು ತಿಂಗಳ ಮಗು ರಬ್ಬಿಯನ್ನು ಉಳಿಸಲು ಬೇರೆ ದಾರಿ ಇರಲಿಲ್ಲ. ಮಗುವಿನ ಪೋಷಕರು ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸೆಗೆ ಹಣ ಹುಡುಕಲು ಹೆಣಗಾಡುತ್ತಿದ್ದರು. ಮಿಲಾಪ್ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಅವರಿಗೆ ಸಹಾಯ ಮಾಡಿತು.
ಶಸ್ತ್ರಚಿಕಿತ್ಸೆಯ ನಂತರ ರಬ್ಬಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅದೇ ರೀತಿ ಟಿ ಸೆಲ್ ಲಿಂಫೆÇೀಮಾ ಮತ್ತು ಗ್ಯಾಲಿಯನ್ ಬ್ಯಾರೆ ಸಿಂಡ್ರೋಮ್ ನೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ತ್ರಿಶೂರ್ ಮೂಲದ 45 ವರ್ಷದ ಕವಿತಾ ಶಾಜಿ ಮಿಲಾಪ್ ಮೂಲಕ 4.25 ಲಕ್ಷ ರೂ. ಸಂಗ್ರಹಗೊಂಡು ಚಿಕಿತ್ಸೆಯಲ್ಲಿದ್ದಾರೆ.