ಕಾಸರಗೋಡು: ಕೇಂದ್ರ ಯುವಜನ ಕಲ್ಯಾಣ ಕ್ರೀಡಾ ಮಂತ್ರಾಲಯದ ನ್ಯಾಷನಲ್ ಯೂತ್ ವಾಲಿಂಟಿಯರ್ ಯೋಜನೆಯಲ್ಲಿ ಯುವಜನತೆಗೆ ಅವಕಾಶಗಳಿವೆ. ನೌಕರಿ, ಕಲಾ ಸಾಂಸ್ಕøತಿಕ, ಕ್ರೀಡೆ, ಶುಚಿತ್ವ, ಪರಿಸರ ಸಂರಕ್ಷಣೆ, ಆರೋಗ್ಯ ಕುಟುಂಬ ಕಲ್ಯಾಣ, ಸಮಾಜ ಸುರಕ್ಷೆ ಸಹಿತ ವಲಯಗಳಲ್ಲಿ ಚಟುವಟಿಕೆ ನಡೆಸಲು ಆಸಕ್ತರಾದ ಯುವಜನ ಅರ್ಜಿ ಸಲ್ಲಿಸಬಹುದು.
ಜಿಲ್ಲೆಯ 11 ಬ್ಲಾಕ್ ಗಳಲ್ಲಿ 22 ಮಂದಿಯನ್ನು, ಜಿಲ್ಲಾ ಕಚೇರಿಗೆ ಇಬ್ಬರನ್ನು ನೇಮಿಸಲಾಗುವುದು. ಅರ್ಜಿದಾರರು 18 ರಿಂದ 29 ವರ್ಷದ ನಡುವಿನ ವಯೋಮಾನದವರಾಗಿರಬೇಕು. ರೆಗ್ಯುಲರ್ ವಿದ್ಯಾರ್ಥಿಗಳು ಮತ್ತು ನೌಕರಿ ಹೊಂದಿರುವವರು ಅರ್ಹರಲ್ಲ. ಎಸ್.ಎಸ್.ಎಲ್.ಸಿ. ಮೂಲ ಶಿಕ್ಷಣಾರ್ಹತೆಯಾಗಿದೆ. ಫೆ.20ರ ಮೊದಲು www.nyks.nic.in ಮೂಲಕ ಆನ್ ಲೈನ್ ರೂಪದಲ್ಲಿ ಮತ್ತು ಕಾಸರಗೋಡು ಸಿವಿಲ್ ಸ್ಟೇಷನ್ ನ ನೆಹರೂ ಯುವ ಕೇಂದ್ರ ಕಚೇರಿಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 04994-255144.