ತಿರುವನಂತಪುರ: ಎಬಿಪಿ-ಸಿ ಮುಂಬರಲಿರುವ ವಿಧಾನ ಸಭಾ ಚುನಾವಣಾ ಸಂಬಂಧಿಸಿ ನಡೆಸಿದ ಸಮೀಕ್ಷಞÉಯಲ್ಲಿ ಆಡಳಿತರೂಢ ಎಡಪಕ್ಷಕ್ಕೆ ಕ್ಲೀನ್ ಚಿಟ್ ನೀಡಿದ್ದು, ಮತದಾರರ ಅಭಿಪ್ರಾಯ ಸಂಗ್ರಹ ಸಮೀಕ್ಷೆಯಂತೆ ಕೇರಳದಲ್ಲಿ ಎಡಪಂಥೀಯರ ಆಡಳಿತ ಮುಂದುವರಿಯಲಿದೆ ಎಂದಿದೆ. ಎಲ್.ಡಿ.ಎಫ್.ಗೆ 83-91 ಸ್ಥಾನಗಳು ಸಿಗಲಿವೆ. ಯುಡಿಎಫ್ 47 ರಿಂದ 55 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇತರರು ಎರಡು ಸ್ಥಾನಗಳನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಅಲ್ಲದೆ ತಮಿಳುನಾಡಿನಲ್ಲಿ ದೊಡ್ಡ ಬಹುಮತದೊಂದಿಗೆ ಡಿಎಂಕೆ-ಕಾಂಗ್ರೆಸ್-ಎಡ ಮೈತ್ರಿ ಅಧಿಕಾರಕ್ಕೆ ಬರಲಿದೆ. ಮೈತ್ರಿಕೂಟಕ್ಕೆ 154 ರಿಂದ 162 ಸ್ಥಾನಗಳು ಸಿಗಲಿವೆ. ಅಸ್ಸಾಂನಲ್ಲಿ ಬಿಜೆಪಿ 68 ರಿಂದ 76 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಸಮೀಕ್ಷೆಯ ಪ್ರಕಾರ ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಲಾಗಿದೆ.
ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ 17-21 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.ಕಾಂಗ್ರೆಸ್ 8-12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಆಡಳಿತ ಮುಂದುವರಿಸಲಿದೆ. ತೃಣಮೂಲ ಕಾಂಗ್ರೆಸ್ 148-164 ಸ್ಥಾನಗಳನ್ನು ಗೆಲ್ಲಲಿದೆ. 92-108 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.