ಕಾಸರಗೋಡು: ಡಿವೈಎಸ್‍ಪಿ, ರಾಷ್ಟ್ರಪತಿ ಪದಕ ವಿಜೇತ ಹರೀಶ್ಚಂದ್ರ ನಾಯ್ಕ್ ಅವರಿಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ನೀಡಲಾಗಿದ್ದು, ಕಣ್ಣೂರು ಜಿಲ್ಲೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇವರೊಂದಿಗೆ ಜಿಲ್ಲೆಯ ಇತರ ಅಧಿಕಾರಿಗಳನ್ನೂ ಬಡ್ತಿಯೊಂದಿಗೆ ವರ್ಗಾವಣೆ ನಡೆಸಲಾಗಿದೆ.
ಕಾಸರಗೋಡು ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಸಿ.ಎ ಅಬ್ದುಲ್ ರಹೀಂ, ಆದೂರು ಸರ್ಕಲ್ ಇನ್ಸ್‍ಪೆಕ್ಟರ್ ಬಿ.ಕೆ ವಿಶ್ವಂಬರನ್ ಬಡ್ತಿ ಪಡೆದ ಇತರ ಅಧಿಕಾರಿಗಳಾಗಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿ, ನಂತರ ಕೇರಳ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಹರೀಶ್ಚಂದ್ರ ನಾಯ್ಕ್ ಅವರು ಎಸ್.ಐ, ಸರ್ಕಲ್ ಇನ್ಸ್‍ಪೆಕ್ಟರ್ ಹಾಗೂ ಡಿವೈಎಸ್‍ಪಿಯಾಗಿ ಬಡ್ತಿ ಪಡೆದು, ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.