ಕಾಸರಗೋಡು: ಹಾಲು ಅಭಿವೃದ್ಧಿ ಇಲಾಖೆಯ ಕಾಸರಗೋಡು ರೀಜನಲ್ ಡಯರಿ ಲ್ಯಾಬ್ ನಲ್ಲಿ ಹಾಲು ಉತ್ಪನ್ನಗಳು,ನೀರು, ಹಿಂಡಿ ಇತ್ಯಾದಿಗಳ ಗುಣಮಟ್ಟ ತಪಾಸಣೆ ನಡೆಸುವ ಕೆಮೆಸ್ಟ್ರಿ, ಮೈಕ್ರೋ ಬಯಾಲಜಿ ಟ್ರೈನಿ ಅನಲಿಸ್ಟ್ ಗಳ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ.
ಕೆಮೆಸ್ಟ್ರಿ ಟ್ರೈನಿ ಅನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ ಟೆಕ್/ಬಿ.ಎಸ್.ಸಿ. ಡಯರಿ ಸಯನ್ಸ್ ಯಾ ಬಿ.ಎಸ್.ಸಿ. ಕೆಮೆಸ್ಟ್ರಿ, ಇಂಡಸ್ಟ್ರೀಸ್ ಕೆಮೆಸ್ಟ್ರಿ ಪದವೀಧರರಾಗಿರಬೇಕು. ಬಿ.ಟೆಕ್‍ಬಿ.ಎಸ್.ಸಿ. ಡಯರಿ ಸಯನ್ಸ್ ಯಾ ಮೈಕ್ರೋಬಯಾಲಜಿ ಪದವೀಧರರು ಮೈಕ್ರೋ ಬಯಾಲಜಿ ಟ್ರೈನಿ ಅನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಲ್ಯಾಬ್ ಗಳಲ್ಲಿ ವೃತ್ತಿ ಅನುಭವಹೊಂದಿರುವವರಿಗೆಆದ್ಯತೆಯಿದೆ. ಮಾ.15ರ ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಡೆಪ್ಯೂಟಿ ಡೈರೆಕ್ಟರ್,ರೀಜನಲ್ ಡಯರಿ ಲ್ಯಾಬ್ ಕಾಸರಗೋಡು, ನಾಯಿಕಾಪು, ಕುಂಬಳೆ ಅಂಚೆ, ಪಿನ್ : 671321 ಎಂಬ ವಿಳಾಸಕ್ಕೆ ಅರ್ಜಿ ಸಲಿಸಬೇಕು.ಸಂದರ್ಶನಕ್ಕೆ ಅರ್ಹತೆಹೊಂದಿರುವವರ ಮಾಹಿತಿಗಳನ್ನು ಮಾ.17ರಂದು ಕಚೇರಿ ನೋಟ್ ನಲ್ಲಿ ಪ್ರಕಟಿಸಲಾಗುವುದು. ಸಂದರ್ಶನಮಾ.18ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ರೀಜನಲ್ ಡಯರಿಲ್ಯಾಬ್ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯದಲ್ಲಿನಡೆಯಲಿದೆ. ದೂರವಾಣಿ ಸಂಖ್ಯೆ: 9496514910.