ತಿರುವನಂತಪುರ: ಮೊದಲ ವಿ. ಪರಮೇಶ್ವರ್ ಜಿ ಸ್ಮಾರಕ ಉಪನ್ಯಾಸಕ್ಕಾಗಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಗುರುವಾರ ಕೇರಳಕ್ಕೆ ಆಗಮಿಸಿದರು. ತಿರುವನಂತಪುರಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಕೇಂದ್ರ ಸಚಿವ ವಿ. ಮುರಲೀಧರನ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು. ಬಳಿಕ ಉಪರಾಷ್ಟ್ರಪತಿ ಮತ್ತವರ ಕುಟುಂಬ ರಾಜ್ ಭವನಕ್ಕೆ ಭೇಟಿ ನೀಡಿತು. ಮುರಲೀಧರನ್ ಅವರು ಕೇರಳದ ಉಡುಗೊರೆಯಾಗಿ ಅನಂತಶಯನದ ಭಗವಾನ್ ಶ್ರೀಪದ್ಮನಾಭ ಸ್ವಾಮಿಯ ಮಾದರಿ ಶಿಲ್ಪವನ್ನು ಹಸ್ತಾಂತರಿಸಿದರು.