ತಿರುವನಂತಪುರ: ರಾಜ್ಯದ ವಿಧಾನ ಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳು ಸಕ್ರಿಯಗೊಂಡಿದ್ದು, ಕೇರಳ ತಲಪಿರುವ ಸಂಸz, ಕಾಂಗ್ರೆಸ್ಸ್ ಮುಖಂಡ ರಾಹುಲ್ ಗಾಂಧಿ ಕಾಂಗ್ರೆಸ್ಸ್ ರಾಜ್ಯ ಸಮಿತಿಯ ನೇತಾರರಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ಹಳೆಯ ಮುಖಗಳು ಮಾತ್ರ ಅಭ್ಯರ್ಥಿಗಳಾಗಬಾರದು ಮತ್ತು ಯುವಕರು ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಭ್ಯರ್ಥಿಗಳನ್ನು ನಿರ್ಧರಿಸುವಲ್ಲಿ ಮತ್ತು ಒಟ್ಟಾಗಿ ಚುನಾವಣೆಯನ್ನು ಎದುರಿಸುವಲ್ಲಿ ಯಶಸ್ಸಿನ ಸಾಧ್ಯತೆಗಳಿಗೆ ಆದ್ಯತೆ ನೀಡಬೇಕು ಎಂದರು.
ಆಳ ಸಮುದ್ರದ ಮೀನುಗಾರಿಕೆ ವಿವಾದವನ್ನು ಮೀನುಗಾರರಿಗೆ ವಿವರಿಸಲು ಮೆರವಣಿಗೆ ನಡೆಸಲು ಯುಡಿಎಫ್ ನಿರ್ಧರಿಸಿತು. ಟಿಎನ್ ಪ್ರತಾಪ್ ಮತ್ತು ಶಿಬುಬೇಬಿ ಜಾನ್ ನೇತೃತ್ವದ ಮೆರವಣಿಗೆ ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ. ಇದು ಮಾರ್ಚ್ 5 ರಂದು ಎರ್ನಾಕುಳಂನಲ್ಲಿ ಕೊನೆಗೊಳ್ಳಲಿದೆ. ಯುಡಿಎಫ್ ನೇತೃತ್ವದ ಸಹ ಪಕ್ಷಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ಫೆ.26 ರಿಂದ ಪ್ರಾರಂಭವಾಗಲಿದೆ. ಯುಡಿಎಫ್ ಸಭೆ ಈ ತಿಂಗಳ 28 ರಂದು ನಡೆಯಲಿದೆ.