ಪುಣೆ: ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸುವುದಕ್ಕೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.
ಕೋವಿಡ್-19, ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೇ ಭಾರತ-ಇಂಗ್ಲೆಂಡ್ ನಡುವಿನ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.
ಎಲ್ಲಾ ಪಂದ್ಯಗಳನ್ನು ಪುಣೆಯಲ್ಲಿಯೇ ನಡೆಯಲಿದೆಯಾ ಅಥವಾ ಕೊನೆಯ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಬೇಕಾ? ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಪ್ರೇಕ್ಷಕರಿಲ್ಲದೇ ಇಂಗ್ಲೆಂಡ್-ಭಾರತ ನಡುವಿನ ಏಕದಿನ ಸರಣಿಯನ್ನು ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.