ಪುದುಚೆರಿ: ರಾಜಕಾರಣಿಗಳು ಜನರನ್ನು ಯಾಮಾರಿಸುವುದು ಹೊಸತೇನು ಅಲ್ಲ. ಆದರೆ ಪುದುಚೆರಿ ಸಿಎಂ ವಿ ನಾರಾಯಣಸ್ವಾಮಿ, ತಮ್ಮ ಪಕ್ಷದ ಹೈಕಮಾಂಡ್ ನಾಯಕ ರಾಹುಲ್ ಗಾಂಧಿಯನ್ನೇ ಯಾಮಾರಿಸಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕಾಗಿ ಪುದುಚೆರಿಗೆ ಆಗಮಿಸಿದ್ದರು. ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಮೀನುಗಾರಿಕೆಯಲ್ಲಿ ತೊಡಗಿರುವ ಮಹಿಳೆ ತಮಿಳಿನಲ್ಲಿ ಮಾತನಾಡಿದ್ದನ್ನು ರಾಹುಲ್ ಗಾಂಧಿಯವರಿಗೆ ತಲುಪಿಸುವಲ್ಲಿ ವಿ ನಾರಾಯಣಸ್ವಾಮಿ ಅವರು ಸಾರಾಂಶವನ್ನೇ ಬುಡಮೇಲು ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗತೊಡಗಿದೆ. ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ ಮಹಿಳೆ, ನಮಗೆ ಯಾರೂ ಸಹಾಯಕ್ಕೆ ಬರುವುದಿಲ್ಲ, ನೀರವ್ ಚಂಡಮಾರುತದ ವೇಳೆ ನಮ್ಮ ಕಷ್ಟವನ್ನು ಮುಖ್ಯಮಂತ್ರಿಗಳಾದರೂ ಬಂದು ಆಲಿಸಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಆದರೆ ಇದನ್ನೆ ಬುಡಮೇಲು ಮಾಡಿದ ವಿ ನಾರಾಯಣ ಸ್ವಾಮಿ, ನಾನು ನೀರವ್ ಚಂಡ ಮಾರುತದ ವೇಳೆ ಅವರ ಪ್ರದೇಶಕ್ಕೆ ಹೋಗಿದ್ದೆ, ಪರಿಹಾರ ವಿತರಣೆ ಮಾಡಿದ್ದೆ, ಆಕೆ ಅದನ್ನೇ ಹೇಳುತ್ತಿದ್ದಾರೆ ಎಂದು ಮಹಿಳೆಯ ಕಣ್ಣೆದುರೇ ರಾಹುಲ್ ಗಾಂಧಿಯನ್ನು ಯಾಮಾರಿಸಿದ್ದಾರೆ.