HEALTH TIPS

ಆರ್ಥಿಕ ಪ್ರಗತಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳ ನಿಕಟ ಕಾರ್ಯನಿರ್ವಹಣೆ ಅಗತ್ಯ: ಪ್ರಧಾನಿ ಮೋದಿ

             ಮುಂಬೈ: ಆರ್ಥಿಕ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಕಟವಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


            ನೀತಿ ಆಯೋಗದ ಆಡಳಿತಾತ್ಮಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸರ್ಕಾರದ ಆತ್ಮ ನಿರ್ಭರ್ ಭಾರತ ಕಾರ್ಯಕ್ರಮದ ಭಾಗವಾಗಲು ಖಾಸಗಿ ವಲಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕು ಎಂದರು.

           ದೇಶದ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆರ್ಥಿಕ ಪ್ರಗತಿಗಾಗಿ ಸರ್ಕಾರವು ಖಾಸಗಿ ವಲಯಕ್ಕೆ ಗೌರವ ನೀಡಬೇಕಾಗಿದೆ ಎಂದು ಹೇಳಿದರು.ದೇಶ ಅತ್ಯುನ್ನತ ವೇಗದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವ ಅಂಶಗಳನ್ನೊಳಗೊಂಡ 2021-22ನೇ ಸಾಲಿನ ಕೇಂದ್ರ ಬಜೆಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸರ್ಕಾರ ಕೈಗೊಂಡಿರುವ ಉಪಕ್ರಮಗಳು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಎಲ್ಲರಿಗೂ ತನ್ನ ಸಂಪೂರ್ಣ ಸಾಮಥ್ರ್ಯಕ್ಕೆ ಅವಕಾಶ ನೀಡುತ್ತದೆ ಎಂದು ಮೋದಿ ಹೇಳಿದರು.ಕೃಷಿ ಕ್ಷೇತ್ರವನ್ನು ಉಲ್ಲೇಖಿಸಿದ ಪ್ರಧಾನಿ, ಖಾದ್ಯ ತೈಲದಂತಹ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪ್ರಯತ್ನ ಮಾಡಬೇಕಾಗಿದೆ. ಅಲ್ಲದೇ ಅವುಗಳ ಆಮದನ್ನು ನಿಯಂತ್ರಿಸಬೇಕಾಗಿದೆ. ರೈತರಿಗೆ ಮಾರ್ಗದರ್ಶನ ಮೂಲಕ ಇದನ್ನು ಸಾಧಿಸಬೇಕಾಗಿದೆ. ಆಮದಿನ ಮೇಲೆ ಖರ್ಚು ಮಾಡುವ ಹಣವನ್ನು ರೈತರ ಖಾತೆಗಳಿಗೆ ಹಾಕಬಹುದಾಗಿದೆ ಎಂದರು.

          ಜನರ ಮೇಲಿನ  ಹೊರೆ ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ತಂತ್ರಜ್ಞಾನದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿಯಮಗಳನ್ನು ಕಡಿಮೆ ಮಾಡಲು ಸಮಿತಿಗಳನ್ನು ರಚಿಸುವಂತೆ ರಾಜ್ಯಗಳಿಗೆ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries