ಕಾಸರಗೋಡು: ಲೈಫ್ ವಸತಿ ಯೋಜನೆಗಳ ಮೂಲಕ ವಿವಿಧ ಹಂತಗಳಲ್ಲಿ, ಪಿ.ಎಂ.ಎ.ವೈ. ಲೈಫ್ ಯೋಜನೆಗಳ ಮೂಲಕ ವಿವಿಧ ವಿಭಾಗಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಿರುವ 8989 ಮನೆಗಳಿಗೆ ವಿಮೆ ಸಂರಕ್ಷಣೆ ಲಭಿಸಲಿದೆ.
ರಾಜ್ಯ ವಿಮೆ ಇಲಾಖೆಯು ಸಾರ್ವಜನಿಕ ವಿಮೆ ಕಂಪನಿಯಾಗಿರುವ ಯುನೈಟೆಡ್ ಇನ್ಶೂರೆನ್ಸ್ ಕಂಪನಿ ಜತೆ ಸೇರಿ ಈ ಯೋಜನೆ ಜಾರಿಗೊಳಿಸಲಿದೆ. ಯೋಜನೆಯ ಮೊದಲ ಮೂರು ವರ್ಷಗಳ ಅವಧಿಯ ಪ್ರೀಮಿಯಂ ರಾಜ್ಯ ಸರಕಾರವೇ ಲೈಫ್ ಯೋಜನೆ ಮೂಲಕ ಪಾವತಿಸಲಿದೆ. ನಂತರದ ವರ್ಷಗಳಲ್ಲಿ ಫಲಾನುಭವಿ ನೇರವಾಗಿ ಈ ಪ್ರೀಮಿಯಂ ಪಾವತಿಸಬೇಕು. ಪ್ರತಿ ಮನೆಗೆ ಗರಿಷ್ಠ 4 ಲಕ್ಷ ರೂ.ನ ವಿಮೆ ಸಂರಕ್ಷಣೆ ಲಭಿಸಲಿದೆ. ಪ್ರಕೃತಿ ವಿಕೋಪ, ಗಲಭೆ, ದಾಳಿ, ರಸ್ತೆ, ರೈಲು ಹಳಿ ಚಟುವಟಿಕೆಗಳು, ಮೃಗಗಳ ಹಾವಳಿ, ಇನ್ನಿತರ ದುರಂತಗಳು ಇತ್ಯಾದಿಗಳಲ್ಲಿ ನಷ್ಟಪರಿಹಾರವಾಗಿ ವಿಮೆ ದೊರೆಯಲಿದೆ.
ಲೈಫ್ ವಸತಿಗಳ ವಿಮೆ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್ ಗಳಲ್ಲಿ, ನಗರಸಭೆಗಳಲ್ಲಿ ಲೈಫ್ ಫಲಾನುಭವಿಗಳ ಸಭೆಗಳು ಜರಗಿದುವು.