HEALTH TIPS

BREAKING- ಉತ್ತರಾಖಂಡದಲ್ಲಿ ಹಿಮಸ್ಫೋಟ: ಭಾರಿ ಪ್ರವಾಹದ ಆತಂಕ, ಹಲವರು ನಾಪತ್ತೆ, ರಾಜ್ಯಾದ್ಯಂತ ಹೈ ಅಲರ್ಟ್

       ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಹಿಮಸ್ಫೋಟ ಸಂಭವಿಸಿದ್ದು, ನೈಸರ್ಗಿಕ ವಿಕೋಪ ಕೇಂದ್ರ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರವಾಹದ ಕುರಿತು ಹೈ ಅಲರ್ಟ್ ಘೋಷಣೆ ಮಾಡಿದೆ.
       ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹಿಮನದಿ ಸ್ಪೋಟದಿಂದಾಗಿ ಧೌಲಿಗಂಗಾ ನದಿಯಲ್ಲಿನ ಹಿಮದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಣಾಮ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ.  

     ಹಿಮನದಿ ಸ್ಫೋಟಗೊಂಡ ಮಾಹಿತಿ ಮೇರೆಗೆ ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಪೊಲೀಸರು ಧ್ವನಿವರ್ಧಕಗಳ ಮೂಲಕ ನದಿಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದಾರೆ. ಅಂತೆಯೇ ಕೂಡಲೇ ತಗ್ಗು ಪ್ರದೇಶ ಮತ್ತು ನದಿ ಪಾತ್ರದಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಚಮೋಲಿ, ಕರ್ಣ​ಪ್ರಯಾಗ್ ನಲ್ಲಿ ಅಲಕಾನಂದ ನದಿ ತಟದಲ್ಲಿ ವಾಸವಿರುವ ಜನರು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.

         150 ಮಂದಿ ನಾಪತ್ತೆ:
     ರೈಣಿ ಗ್ರಾಮದ ಬಳಿ ಭಾರಿ ಹಿಮಕುಸಿತದಿಂದ ಅವಾಂತರ ಸೃಷ್ಟಿಯಾಗಿದ್ದು, ಈಗಾಗಲೇ ಧೌಲಿಗಂಗಾ ನದಿ ಪ್ರವಾಹದಿಂದ ಹಲವು ಮನೆಗೆ ಹಾನಿಯಾಗಿದೆ. ಋಷಿಗಂಗಾ ಪವರ್ ಪ್ರಾಜೆಕ್ಟ್‌ ಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈವರೆಗೆ ಸುಮಾರು 150 ಜನ        ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಿಮಸ್ಪೋಟಕ್ಕೆ ತುತ್ತಾಗಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್, ಐಟಿಬಿಪಿ ಸಿಬ್ಬಂದಿ‌ ಆಗಮಿಸಿದ್ದಾರೆ. ನದಿಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಜೊತೆಗೆ ಪ್ರವಾಹದಲ್ಲಿ 2 ಸೇತುವೆಗಳು ಕೊಚ್ಚಿಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries