ನವೆದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ ಹೊಸತಾಗಿ 11,649 ಕೋವಿಡ್-19 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ತಿಳಿಸಿದೆ.
ಅದೇ ಹೊತ್ತಿಗೆ ಕೊರೊನಾ ವೈರಸ್ ಪಿಡುಗಿನಿಂದ ಮುಕ್ತಿ ಹೊಂದಿರುವ 9,489 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದೆ.
ದೇಶದಲ್ಲಿ ಫೆಬ್ರವರಿ 15ರ ವೇಳೆಗೆ 1,39,637 ಸಕ್ರಿಯ ಪ್ರಕರಣಗಳು ದಾಖಲಾಗಿದೆ.
ಈ ನಡುವೆ ಕೋವಿಡ್-19ನಿಂದಾಗಿ ಕಳೆದೊಂದು ದಿನದಲ್ಲಿ 90 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 1,55,732ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಒಟ್ಟು 1,09,16,589 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಇದುವರೆಗೆ 1,06,21,220 ಮಂದಿ ಬಿಡುಗಡೆ ಹೊಂದಿದ್ದಾರೆ.
ಏತನ್ಮಧ್ಯೆ ಭಾರತದಲ್ಲಿ 82,85,295 ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ಕೋವಿಡ್-19 ಲಸಿಕೆ ಅಭಿಯಾನವನ್ನು ಭಾರತದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆರಂಭದಲ್ಲಿ ಮುಂಚೂಣಿಯ ಸೇನಾನಿಗಳಿಗೆ ಚುಚ್ಚುಮದ್ದು ನೀಡಲಾಗುತ್ತಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಇಂತಿದೆ (ಫೆ.15):
ಒಟ್ಟು ಪ್ರಕರಣ: 1,09,16,589
ಬಿಡುಗಡೆ: 1,06,21,220
ಮರಣ: 1,55,732
ಸಕ್ರಿಯ ಪ್ರಕರಣಗಳು: 1,39,637
ಒಟ್ಟು ಕೋವಿಡ್-19 ಲಸಿಕೆ ವಿತರಣೆ: 82,85,295