HEALTH TIPS

WhatsApp: ನಿಮ್ಮ ವಿಶೇಷ ದಿನಾಂಕ ಮತ್ತು ಸಮಯವನ್ನು ಮರೆಯದಿರಲು ಮೆಸೇಜ್ ಸೆಡ್ಯೂಲ್ ಫೀಚರ್ ಲಭ್ಯ-ಇಲ್ಲಿದೆ ಒಂದಷ್ಟು

 

           ವಾಟ್ಸ್ ಆಫ್ ಪ್ರಪಂಚದ ಹೆಚ್ಚು ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ರ್ನಲ್ಲಿ ಒಂದಾಗಿದ್ದು 1.5 ಮಿಲಿಯನ್ ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ನಿಮ್ಮ ಮೆಸೇಜ್ಗಳು, ಫೆÇೀಟೊಗಳು ಮತ್ತು ವೀಡಿಯೊಗಳನ್ನು ಕಳುಹಿಸಲು WhatsApp ನಿಮಗೆ ಅವಕಾಶ ಮಾಡಿಕೊಡುತ್ತದೆ ಆದರೆ ತಕ್ಷಣವೇ ನಿಮ್ಮ ಮೆಸೇಜನ್ನು ಸರಿಯಾದ ಸಮಯದಲ್ಲಿ ತಲುಪಿಸಲು ಸದ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.


      ವಾಟ್ಸ್ ಆಫ್ ನಿಮ್ಮ ಮೆಸೇಜ್ಗಳನ್ನು ನೀವು ನಿಗದಿಪಡಿಸುವ ಸಮಯದ ಆಯ್ಕೆಯನ್ನು ಅಷ್ಟಾಗಿ ಒದಗಿಸುವುದಿಲ್ಲವಾದರೂ ಈ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಉನ್ನತ ಮಾನದಂಡದಲ್ಲಿರುವುದಿಲ್ಲ. ಆದರೆ ಪ್ರಮುಖ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಿಮ್ಮ ಮೆಸೇಜ್ಗಳನ್ನು ಕಾರ್ಯಯೋಜನೆ ಮಾಡಲು ಅನುವು ಮಾಡಿಕೊಡುವ ಬಹಳಷ್ಟು ಅಪ್ಲಿಕೇಶನ್ಗಳ ಬಗ್ಗೆ ನೋಡೋಣ.

1. ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ SKEDit Scheduling App ಎಂಬ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಇನ್ಸ್ಟಾಲ್ ಮಾಡಿದ ನಂತರ ಅಪ್ಲ್ಲಿಕೇಷನನ್ನು ತೆರೆಯಿರಿ ಇಲ್ಲಿ ನಿಮ್ಮ ಫೇಸ್ಬುಕ್ ಅಥವಾ ಹೊಸ ಅಕೌಂಟ್ ಕ್ರಿಯೇಟ್ ಮಾಡಬವುದು.

3. ಮೊದಲ ಬಾರಿಗೆ ಬಳಸುತ್ತಿದ್ದರೆ ಅಕೌಂಟ್ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ ತೆರೆಯಿರಿ.

4. ತೆರೆದ ನಂತರ ಇಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್ವರ್ಡ್ ನಮೂದಿಸಿರಿ.

5. ಇಲ್ಲಿನ ಎಲ್ಲಾ ಮಾಹಿತಿ ನೀಡಿದ ನಂತರ ಈಗ Create Account ಮೇಲೆ ಕ್ಲಿಕ್ ಮಾಡಿರಿ.

6. ಅಕೌಂಟ್ ಕ್ರಿಯೇಟ್ ಆದ ನಂತರ ಪುನಃ ನೀವು ಬಳಸಿದ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ.

7. ಇದರೊಳಗೆ ಸೈನ್ ಇನ್ ಆದ ನಂತರ ನಿಮಗೆ WhatsApp Business, WhatsApp, SMS, Email, Call ಮತ್ತು Facebook ಕಾಣಿಸುತ್ತದೆ.

8. ಇದರಲ್ಲಿ ನೀವು ಮೊದಲಿಗೆ WhatsApp ಮೇಲೆ ಕ್ಲಿಕ್ ಮಾಡಿ ಇಲ್ಲಿ To ಅನ್ನುವ ನಂತರ ಯಾರಿಗೆ ಮೆಸೇಜ್ ಕಳುಯಿಸಬೇಕೋ ಅವರ ನಂಬರ್ ಸೇರಿಸಿ.

9. ನಿಮ್ಮ ಆತ್ಮೀಯರ ನಂಬರ್ ಸೇರಿಸಿದ ನಂತರ ಏನು ಬರೆಯಬೇಕೋ ಅದನ್ನು ಇಲ್ಲಿ ಬರೆಯಿರಿ.

10. ನಿಮ್ಮ ಮೆಸೇಜ್ ಟೈಪ್ ಆದ ನಂತರ ಕೆಳಗೆ ನೋಡಿ ಯಾವಾಗ ಕಳುಯಿಸಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.

11. ಇದರಲ್ಲಿ ನಿಮ್ಮ ಟೈಮ್ ಮತ್ತು ಡೇಟ್ ಆಯ್ಕೆ ಮಾಡಿದ ನಂತರ ನಿಮ್ಮ ಬಲ ಭಾಗದ ಮೇಲೆ ಕೊನೆಯಲ್ಲಿ  ಚಿನ್ಹೆಯ ಮೇಲೆ ಕ್ಲಿಕ್ ಮಾಡಿ.

12. ಈ ರೀತಿಯಲ್ಲಿ ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಯಲ್ ಮಾಡಬವುದು.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries