ಕೇರಳ ವಿಧಾನಸಭೆಯಲ್ಲಿ ಸ್ಥಾನ ಕಳೆದುಕೊಂಡ ಮೊದಲ ಶಾಸಕರು ಯಾರೆಂಬ ಬಗ್ಗೆ ಕುತೂಹಲವೇ? ಹಾಗಿದ್ದರೆ ಇಲ್ಲಿದೆ ಮಾಹಿತಿ. ಸಿಪಿಐ ನಾಯಕಿ ರೋಸಮ್ಮಾ ಪುನ್ನಸ್ ಯುನೈಟೆಡ್ ಕೇರಳದ ಮೊದಲ ಅಸೆಂಬ್ಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರು ಮೊದಲ ಬಾರಿಗೆ ತಮ್ಮ ಶಾಸಕ ಹುದ್ದೆಯನ್ನೂ ಕಳೆದುಕೊಂಡರು. ನಂತರದ ಉಪಚುನಾವಣೆಯಲ್ಲಿ, ರೋಸಮ್ಮ ಪುನ್ನಸ್ ಅವರು ಬಹುಮತದೊಂದಿಗೆ ವಿಧಾನಸಭೆಗೆ ಆಯ್ಕೆಯೂ ಆದರು.
ದೇವಿಕುಳಂನ ಸಿಪಿಐ ಸದಸ್ಯೆ ರೋಸಮ್ಮ ಪುನ್ನಸ್ 1957 ರಲ್ಲಿ ಮೊದಲ ಬಾರಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. ರೋಸಮ್ಮ ಪುನ್ನಸ್ ಅವರನ್ನು ಮೊದಲ ಬಾರಿಗೆ ಏಪ್ರಿಲ್ 10, 1957 ರಂದು ಪೆÇ್ರ-ಟರ್ಮ್ ಸ್ಪೀಕರ್ ಆಗಿ ನೇಮಿಸಲಾಯಿತು. ರೋಸಮ್ಮ ಪುನ್ನಸ್ ಅವರು ಇಎಂಎಸ್ ನಂಬೂದಿರಿಪಾಡ್ ಸೇರಿದಂತೆ ಮೊದಲ ಕೇರಳ ವಿಧಾನಸಭೆಯ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದವರೂ ಆಗಿದ್ದಾರೆ!
ಬಿಕೆ ನಾಯರ್ ಅವರು 1957 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಾಮಪತ್ರಗಳನ್ನು ತಿರಸ್ಕರಿಸಿದ್ದರ ವಿರುದ್ಧ ಕೊಟ್ಟಾಯಂ ಚುನಾವಣಾ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದರು. 1958 ರಲ್ಲಿ, ಚುನಾವಣೆಯನ್ನು ಶೂನ್ಯ ಮತ್ತು ಅನೂರ್ಜಿತವೆಂದು ಘೋಷಿಸಲಾಯಿತು. ಬಿ.ಕೆ. ನಾಯರ್‍ಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಆದೇಶಿಸಿದರು. ಇದರೊಂದಿಗೆ ದೇವಿಕುಳಂನಲ್ಲಿ ಉಪಚುನಾವಣೆ ಘೋಷಿಸಲಾಯಿತು. ಉಪಚುನಾವಣೆಯಲ್ಲಿ ಬಿ.ಕೆ. ನಾಯರ್ ಅವರನ್ನು ಪರಾಭವಗೊಳಿಸಿದ ರೋಸಮ್ಮ ಪುನ್ನಸ್ ಅಸೆಂಬ್ಲಿಗೆ ಮರಳಿದರು.
ರೋಸಮ್ಮ ಪುನ್ನಸ್ 1987 ರಲ್ಲಿ ನಡೆದ 8 ನೇ ಕೇರಳ ವಿಧಾನಸಭೆಯಲ್ಲಿ ಆಲಪ್ಪುಳ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.