ಕೇರಳ ವಿಧಾನಸಭೆಯಲ್ಲಿ ಅಲ್ಪಾವಧಿಯ ದಾಖಲೆ ಹೊಂದಿರುವವರು ಹರಿದಾಸ್ ಎಂಬವರು. ಹರಿದಾಸ್ ಕೇವಲ ಹತ್ತು ದಿನಗಳ ಕಾಲ ಶಾಸಕರಾಗಿದ್ದರು. ಹರಿದಾಸ್ 1980 ರಲ್ಲಿ ಆರನೇ ಅಸೆಂಬ್ಲಿಯಲ್ಲಿ ನಿಲಂಬೂರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಫೆಬ್ರವರಿ 15, 1980 ರಂದು ಅವರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 25 ರಂದು ರಾಜೀನಾಮೆ ನೀಡಿದರು.
ನೀಲಂಬೂರಿನಲ್ಲಿ ಅಂದು ಕಾಂಗ್ರೆಸ್-ಎ ಪ್ರತಿನಿಧಿಸುವ ಎಡ ಡೆಮಾಕ್ರಟಿಕ್ ಫ್ರಂಟ್ ಅಭ್ಯರ್ಥಿಯಾಗಿ ಹರಿದಾಸ್ ಸ್ಪರ್ಧಿಸಿ ಜಯಗಳಿಸಿದ್ದರು. ಕಾಂಗ್ರೆಸ್ -ಐ ವಿಭಾಗದ ಟಿ.ಕೆ. ಹಮ್ಸಾ ಅವರನ್ನು 7,029 ಮತಗಳಿಂದ ಸೋಲಿಸಿ ಅವರು ಜಯಶಾಲಿಯಾಗಿದ್ದರು. ಸಿ. ಹರಿದಾಸ್ ರಾಜೀನಾಮೆಯಿಂದ ಸೃಷ್ಟಿಯಾದ ಖಾಲಿ ಸ್ಥಾನಕ್ಕೆ ನೀಲಾಂಬೂರ್‍ನಿಂದ ನಡೆದ ಉಪಚುನಾವಣೆಯಲ್ಲಿ ಆರ್ಯಾಡನ್ ಮೊಹಮ್ಮದ್ ಜಯಗಳಿಸಿದರು. ಉಪಚುನಾವಣೆಯಲ್ಲಿ ಗೆದ್ದ ಆರ್ಯಾಡನ್ ಸಚಿವರೂ ಆದರು.
ಒಪ್ಪಂದದ ಪ್ರಕಾರ ಹರಿದಾಸ್‍ಗೆ ಆ ಬಳಿಕ ರಾಜ್ಯಸಭಾ ಸಂಸದ ಸ್ಥಾನ ನೀಡಲಾಯಿತು. ಬಳಿಕ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.