ಕಾಸರಗೋಡು: ಜಿಲ್ಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿಗೆ ಜಿಲ್ಲೆಯಲ್ಲಿ ಆಯ್ದ 10 ಕೇಂದ್ರಗಳಲ್ಲಿ ವಾಕ್ಸಿನೇಷನ್ ನೀಡುವ ಕಾರ್ಯಕ್ರಮ ಸೋಮವಾರ ಆರಂಭಗೊಂಡಿತು.
ಮಂಜೇಶ್ವರ, ಬೇಡಡ್ಕ ಸಾಮಾಜಿಕ ಆರೋಗ್ಯ ಕೇಂದ್ರಗಳು, ಮುಳ್ಳೇರಿಯ, ಚಟ್ಟಂಚಾಲ್, ಚಿತ್ತಾರಿಕಲ್ಲು, ಎಣ್ಣಪ್ಪಾರ, ಆನಂದಾಶ್ರಮ, ವೆಳ್ಳರಿಕುಂಡ್, ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ, ತ್ರಿಕರಿಪುರ ತಾಲೂಕು ಆಸ್ಪತ್ರೆ ಗಳಲ್ಲಿ ವಾಕ್ಸಿನೇಷನ್ ವಿತರಿಸಲಾಗುತ್ತಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ವಾಕ್ಸಿನೇಷನ್ ನಡೆಯುತ್ತಿದ್ದು, ಆಶಾ ಕಾರ್ಯಕರ್ತೆಯರ ಮುಖಾಂತರ ಮುಂಗಡ ನೋಂದಣಿ ನಡೆಸಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.