ತಿರುವನಂತಪುರ: ರಾಜ್ಯದಲ್ಲಿ ಇಂದು 1054 ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ತಿರುವನಂತಪುರ 130, ಮಲಪ್ಪುರಂ 124, ಎರ್ನಾಕುಳಂ 119, ಕೋಝಿಕೋಡ್ 117, ಕೊಲ್ಲಂ 116, ಕಣ್ಣೂರು 74, ಆಲಪ್ಪುಳ 70, ತ್ರಿಶೂರ್ 70, ಕೊಟ್ಟಾಯಂ 68, ಪಾಲಕ್ಕಾಡ್ 50, ಪತ್ತನಂತಿಟ್ಟು 42, ಕಾಸರಗೋಡು 29, ಇಡುಕ್ಕಿ 25, ವಯನಾಡ್ 20 ಎಂಬಂತೆ ಸೋಂಕು ಪತ್ತೆಹಚ್ಚಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ಬಂದ ಯಾರಲ್ಲೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (99), ದಕ್ಷಿಣ ಆಫ್ರಿಕಾ (3) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 103 ಜನರಿಗೆ ಈವರೆಗೆ ಸೋಂಕು ದೃಢ ಪಡಿಸಲಾಗಿದ್ದು, ಈ ಪೈಕಿ 89 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟಿರುವ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 38,410 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.2.74 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,23,29,604 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 11 ಮಂದಿ ಕೋವಿಡ್ ನಿಂದ ಮೃತಪಟ್ಟಿರುವುದಾಗಿ ದೃಢಪಡಿಸಲಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4,407 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 33 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 903 ಜನರಿಗೆ ಸೋಂಕು ತಗಲಿತು. 113 ಮಂದಿ ಜನರ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ತಿರುವನಂತಪುರ 78, ಮಲಪ್ಪುರಂ 120, ಎರ್ನಾಕುಳಂ 112, ಕೋಝಿಕೋಡ್ 112, ಕೊಲ್ಲಂ 113, ಕಣ್ಣೂರು 49, ಆಲಪ್ಪುಳ 68, ತ್ರಿಶೂರ್ 66, ಕೊಟ್ಟಾಯಂ 59, ಪಾಲಕ್ಕಾಡ್ 24, ಪತ್ತನಂತಿಟ್ಟು 36, ಕಾಸರಗೋಡು 24, ಇಡುಕ್ಕಿ 22, ವಯನಾಡ್ 20 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾದ ವಿವರಗಳಾಗಿವೆ.
ಐವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 3 ಮತ್ತು ತ್ರಿಶೂರ್ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3463 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 121, ಕೊಲ್ಲಂ 667, ಪತ್ತನಂತಿಟ್ಟು 182, ಆಲಪ್ಪುಳ 272, ಕೊಟ್ಟಾಯಂ 334, ಇಡಕ್ಕಿ 45, ಎರ್ನಾಕುಳಂ 632, ತ್ರಿಶೂರ್ 225, ಪಾಲಕ್ಕಾಡ್ 83, ಮಲಪ್ಪುರಂ 171, ಕೋಝಿಕೋಡ್ 334, ವಯನಾಡ್ 118, ಕಣ್ಣೂರು 167, ಕಾಸರಗೋಡು 112 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 27,057 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,60,560 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,43,461 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,39,309 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 4,152 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 449 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ ಸ್ಪಾಟ್ ಇದೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 352 ಹಾಟ್‍ಸ್ಪಾಟ್‍ಗಳಿವೆ.